ಪುದು ಗ್ರಾ.ಪಂ.ನ ಒಂದು ಸ್ಥಾನಕ್ಕೆ ಜು.23 ರಂದುಉಪಚುನಾವಣೆ
ಬಂಟ್ವಾಳ: ಪುದು ಗ್ರಾ.ಪಂ.ನ ತೆರವಾಗಿರುವ ಒಂದು ಸದಸ್ಯ ಸ್ಥಾನಕ್ಕೆ ಜು.23 ರಂದು ಉಪಚುನಾವಣೆ ನಡೆಯಲಿದೆ ಎಂದು ಬಂಟ್ವಾಳ ತಾಲೂಕು ಚುನಾವಣಾಧಿಕಾರಿಯ ಪ್ರಕಟಣೆ ತಿಳಿಸಿದೆ.
ಪುದು ಗ್ರಾಮಪಂಚಾಯತ್ ನ ಸದಸ್ಯರಾದ ಹುಸೈನ್ ಅವರು ನಿಧನರಾದ ಹಿನ್ನೆಲೆಯಲ್ಲಿ ತೆರವಾದ ಈ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.
ಈ ಸದಸ್ಯ ಸ್ಥಾನಕ್ಕೆ ಒಟ್ಟು 830 ಮಂದಿ ಮತದಾರರಿದ್ದು, ಈ ಪೈಕಿ 414 ಪುರುಷರು ಹಾಗೂ 416 ಮಹಿಳಾ ಮತದಾರರನ್ನು ಹೊಂದಿದೆ.
ಒಟ್ಟು 830 ಮತದಾರರಿದ್ದಾರೆ.
ಸುಜೀರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ದಕ್ಷಿಣ ಭಾಗದಲ್ಲಿ ಮತಗಟ್ಟೆಯನ್ನು ಹೊಂದಿದೆ.ಜುಲೈ 26 ರಂದು ಮತ ಎಣಿಕೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಒಂದು ಸ್ಥಾನಕ್ಕೆ ಮೂವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.