Published On: Wed, Jul 19th, 2023

ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಮಾಲೋಚನಾ ಸಭೆ

ಬಂಟ್ವಾಳ : ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮಂಗಳೂರು ಇದರ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಮಾಲೋಚನಾ ಸಭೆಯು ಜು.೧೯ರಂದು ಬುಧವಾರ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ವಹಿಸಿ ಮಾತನಾಡಿ ಮುಂದಿನ ದಿನಗಳಲ್ಲಿ ಹೈನುಗಾರಿಕಾ ರೈತರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಲಿಗೆ ಲೀ.ಗೆ ಕನಿಷ್ಠ ಪಕ್ಷ ೫ ರೂ. ದರವನ್ನು ಹೆಚ್ಚಿಸಲು ಸರಕಾರಕ್ಕೆ ಒಕ್ಕೂಟದ ವತಿಯಿಂದ ಒತ್ತಾಯ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಹೈನುಗಾರಿಕಾ ಕ್ಷೇತ್ರದಲ್ಲಿ ಯುವ ಸಮುದಾಯ ಮುಂದೆ ಬರಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಸಂಘರ್ಷ, ಸವಾಲುಗಳ ನಡುವೆ ಹೈನುಗಾರಿಕಾ ಕ್ಷೇತ್ರವಿದ್ದು, ರೈತರಿಗೆ ಪೂರಕವಾಗುವ ನಿಟ್ಟಿನಲ್ಲಿ ಸಂಘ ಸಕಾರಾತ್ಮಕ ವಾಗಿ ಸ್ಪಂದಿಸಿ, ಹೊಸ ಯೋಜನೆಯನ್ನು ನೀಡಲು ಬದ್ದವಾಗಿದೆ.ಸಹಕಾರಿ ಕ್ಷೇತ್ರದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಉತ್ತಮ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಲು ಉತ್ಪಾದಕರ ಸಂಘ ಈ ಭಾಗದ ಕೃಷಿ ಮತ್ತು ಕುಟುಂಬದ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದು ಅವರು ತಿಳಿಸಿದರು.ಹೈನುಗಾರಿಕಾ ಕೃಷಿಕರ ಸಲಹೆ ಸೂಚನೆಗಳು ಸಂಸ್ಥೆಯನ್ನು ಬೆಳೆಸಲು ಸಹಕಾರಿಯಾಗಬಹುದು ಎಂಬ ಭರವಸೆ ನಮಗಿದೆ ಎಂದು ಅವರು ತಿಳಿಸಿದರು.


ರೈತರ ಪರವಾಗಿ ಮುಖ್ಯಮಂತ್ರಿಯವರನ್ನು ಬೇಟಿಯಾಲು ತೆರಳಿದ್ದೆ ಕಾರಣಾಂತರದಿಂದ ಬೇಟಿಯಾಗಲು ಸಾಧ್ಯವಾಗಲಿಲ್ಲ. ಆದರೆ ಹಾಲಿಗೆ ಕನಿಷ್ಟ ೫ ರೂ ಹೆಚ್ಚಳ ಮಾಡುವಂತೆ ಅವರ ಜೊತೆಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ.ಅವಿಭಜಿತ ಜಿಲ್ಲೆಯಲ್ಲಿ ೫ ರಿಂದ ೬ ಸಾವಿರ ಉತ್ತಮ ತಳಿಯ ಕರುಗಳನ್ನು ರೈತರಿಗೆ ಒದಗಿಸುವ ಪ್ರಯತ್ನ ಮಾಡಲಾಗಿದ್ದು, ಅಮೂಲಕ ಉತ್ತಮ ಇಳುವರಿಯನ್ನು ಪಡೆಯುವ ಯೋಜನೆ ಹೊಂದಿದ್ದೇವೆ ಎಂದರು

ಉಪಾಧ್ಯಕ್ಷ ಎಸ್.ಬಿ ಜಯರಾಮ ರೈ ಬಳಜ್ಜ ಮಾತನಾಡಿ ಆಡಳಿತಾತ್ಮಕ ವಿಚಾರದಲ್ಲಿ ಪಾರದರ್ಶಕತೆಯಿಂದ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ ಅವರು ದೇಶಕ್ಕೆ ಉತ್ತಮ ಭವಿಷ್ಯ ಇರಬೇಕಾದರೆ ಹೈನುಗಾರಿಕಾ ಕ್ಷೇತ್ರ ಬೆಳೆಯಬೇಕಾಗಿದೆ, ಅ ನಿಟ್ಟಿನಲ್ಲಿ ಗುಣಮಟ್ಟದ ಹೈನುಗಾರಿಕೆ ಮಾಡುವ ಪ್ರತಿಜ್ಞೆ ಮಾಡುವ ಅಗತ್ಯತೆ ಇದೆ ಎಂದು ಅವರು ತಿಳಿಸಿದರು.

ನಿರ್ದೇಶಕಿ ಸುಭದ್ರಾ ರಾವ್ ಮಾತನಾಡಿ ಹೈನುಗಾರಿಕೆ ಕೃಷಿ ಸಂಸ್ಕೃತಿಯನ್ನು ಉಳಿಸುವ ಜೊತೆಗೆ ಮಹಿಳಾ ಸಬಲೀಕರಣಕ್ಕೆ ಮುನ್ನುಡಿಯಾಗಲಿ ಎಂದರು

ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಪದ್ಮನಾಭ ಶೆಟ್ಟಿ ಅರ್ಕಜೆ,ಕೆ.ನಾರಾಯಣ ಪ್ರಕಾಶ್, ಬಿ.ಸುಧಾಕರ ರೈ, ಸವಿತಾ ಎನ್ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಅಶೋಕ್ , ಡೈರಿ ಪ್ರಧಾನ ವ್ಯವಸ್ಥಾಪಕ ಶಿವಶಂಕರ ಸ್ವಾಮಿ, ವ್ಯವಸ್ಥಾಪಕ ಡಾ| ರಾಮಕೃಷ್ಣ ಭಟ್, ಡಿ.ಎಮ್ ಕೇಶವ ಸುಳ್ಳಿ,
ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಹಿರಿಯ ಕೃಷಿಕ ಮಜಿ ರಾಮ್ ಭಟ್ , ಪ್ರಮುಖರಾದ ಲಕ್ಷಣ್ ಸಹಿತ ಅನೇಕ ಕೃಷಿಕರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ.ಹಾಗೂ ಪಿಯುಸಿ ವಿಭಾಗದಲ್ಲಿ ಉತ್ತಮ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಮುಂದಿನ ಶಿಕ್ಷಣಕ್ಕೆ ಪ್ರೋತ್ಸಾಹದ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನ ನೀಡಲಾಯಿತು. ಕೃತಕ ಗರ್ಭಧಾರಣಾ ಕಾರ್ಯಕರ್ತರನ್ನು ಗುರುತಿಸಿ ಗೌರವಿಸಲಾಯಿತು.

ವಿಸ್ತರಣಾಧಿಕಾರಿ ಜಗದೀಶ್ ನಿರೂಪಿಸಿದರು. ಸವಿತಾ ಎನ್ ಶೆಟ್ಟಿ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter