ಕಿಕ್ ಬಾಕ್ಸಿಂಗ್ ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕ
ಬಂಟ್ವಾಳ: ಭಾರತ ಸರ್ಕಾರದ ಮಾನ್ಯತೆ ಪಡೆದ ಕರ್ನಾಟಕ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ
ಮೈಸೂರಿನ ಮಹಾರಾಜ ಕಾಲೇಜಿನ ಸ್ಪೋರ್ಟ್ಸ್ ಪೆವಿಲಿಯಾನ್ ನಲ್ಲಿ ಎರಡುದಿನಗಳ ಕಾಲ ನಡೆದ 3ನೇ ರಾಜ್ಯಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ

ದಕ್ಷಿಣ ಕನ್ನಡ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ಸಂಸ್ಥೆಯನ್ನು ಪ್ರತಿನಿಧಿಸಿದ ಇನ್ಸ್ಟಿಟ್ಯೂಟ್ ಅಪ್ ಕರಾಟೆ ಎಂಡ್ ಮಾರ್ಷಲ್ ಆರ್ಟ್ಸ್ ವಿದ್ಯಾರ್ಥಿಗಳಾದ ಅವ್ನಿ ಎನ್ ಮುಡಿಪು ಮತ್ತು ಅನ್ಶಿ ಎನ್ ಮುಡಿಪು ಇವರು ತಲಾ 3 ಚಿನ್ನದ ಪದಕಗಳನ್ನು ಪಡೆದು
ಜಾರ್ಖಂಡ್ ರಾಂಚಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
ಇವರು ಸಂಸ್ಥೆಯ ಮುಖ್ಯ ಶಿಕ್ಷಕರಾದ ನಿತಿನ್ ಯನ್ ಸುವರ್ಣ ಇವರ ಬಳಿ ತರಬೇತಿಯನ್ನು ಪಡೆಯುತಿದ್ದಾರೆ.