ಹಿರಿಯ ಯಕ್ಷಗಾನ ಕಲಾವಿದ ದಿ.ಜಗದೀಶ್ ನಲ್ಕ ಅವರ ಸಂಸ್ಮರಣಾ ಕಾರ್ಯಕ್ರಮ
ಕೈಕಂಬ: ಯಕ್ಷಕಲಾ ಪೊಳಲಿ,ಎಸ್ ಆರ್ ಹಿಂದೂ ಫ್ರೆಂಡ್ಸ್ ಪೊಳಲಿ,ಷಷ್ಟಿ ಯಕ್ಷಗಾನ ಸಮಿತಿ ಪೊಳಲಿ ಹಾಗೂ ಜಗದೀಶ್ ನಲ್ಕ ಅಭಿಮಾನ ಬಳಗ ಇವರ ಸಹಭಾಗಿತ್ವದಲ್ಲಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಠಾರದಲ್ಲಿ ಇತ್ತಿಚೇಗೆ ನಿಧನರಾದ ಹಿರಿಯ ಯಕ್ಷಗಾನ ಕಲಾವಿದ ದಿ.ಜಗದೀಶ್ ನಲ್ಕ ಅವರ ಸಂಸ್ಮರಣಾ ಕಾರ್ಯಕ್ರಮವು ಜು.೧೬ರಂದು ಭಾನುವಾರ ನಡೆಯಿತು.
ಸರಪಾಡಿ ಅಶೋಕ್ ಶೆಟ್ಟಿ ಅವರು ಸಂಸ್ಮರಣಾ ಭಾಷಣ ಮಾಡಿದರು. ದಿಜಗದೀಶ್ ನಲ್ಕ ಇವರ ಧರ್ಮಪತ್ನಿ ಹೇಮಾವತಿ ಜಗದೀಶ್ ನಲ್ಕ ಇವರಿಗೆ ಸಂಸ್ಥೆಯಿಂದ ದಾನಿಗಳಿಂಧ ಸಂಗ್ರಹಿಸಿದ ಮೊತ್ತವನ್ನು ನೀಡಿ ಗೌರವಿಸಲಾಯಿತು.
ಯಕ್ಷಕಲಾ ಪೊಳಲಿ ಇದರ ಸಂಚಾಲಕರಾದ ವೆಂಕಟೇಶ್ ನಾವಡ ಪೊಳಲಿ, ಸಸಿಹಿತ್ಲು ಮೇಳದ ಸಂಚಾಲಕರಾಜೇಶ್ ಗುಜರನ್, ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ, ಚಂದ್ರಶೇಖರ ದೇವಾಡಿಗ ಪೊಳಲಿ,ಸೇಸಪ್ಪ ದೇವಾಡಿಗ ಪೊಳಲಿ ಉಪಸ್ಥಿತರಿದ್ದರು. ಬಿ. ಜನಾರ್ಧನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಪ್ರಸಿದ್ದ ಕಲಾವಿದರಿಂದ “ಕರ್ಣಪರ್ವ” ಎಂಬ ಯಕ್ಷಗಾನ ಬಯಲಾಟ ನಡೆಯಿತು.