“ಪುಣ್ಯ ಕ್ಷೇತ್ರ ಬೀಬೀಲಚ್ಚಿಲ್” ಭಕ್ತಿ ಗೀತೆಗಳ ಬಿಡುಗಡೆ
ಬಜಪೆ: ಅದ್ಯಪಾಡಿ ಶ್ರೀ ಕ್ಷೇತ್ರ ಬೀಬೀಲಚ್ಚಿಲ್ ದುರ್ಗಾಪರಮೇಶ್ವರಿ ದೇವಸ್ಥಾನ ದಲ್ಲಿ ಪುಣ್ಯ ಕ್ಷೇತ್ರ ಬೀಬೀಲಚ್ಚಿಲ್ 5 ಭಕ್ತಿ ಗೀತೆಗಳ ಲೋಕಾರ್ಪಣೆ ಸಮಾರಂಭ ರವಿವಾರ ನಡೆಯಿತು.
ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ವೇದ ಮೂರ್ತಿ ಲಕ್ಷ್ಮೀನಾರಾಯಣ ಅಸ್ರಣ್ಣ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಬೈಲುಬೀಡು ಅಶ್ವಿನ್ ಬಳ್ಳಾಲ , ಸುಧಾಕರ ರಾವ್ ಪೇಜಾವರ, ಬಂಟ್ವಾಳ ಗಾಣಿಗ ಸಂಘದ ಅದ್ಯಕ್ಷ ರಘ ಸಪಲ್ಯ , ಬಜರಂಗದಳ ವಿಭಾಗ ಸಂಚಾಲಕ ಭುಜಂಗ ಕುಲಾಲ್ ಅದ್ಯಪಾಡಿ ,ಬಾಲಕೃಷ್ಣ ಕಾವ,ಯಶೋಧರ ಕಾವ, ರವೀಂದ್ರ ಕೌಡೂರು, ಪುರುಷೋತ್ತಮ ಪೂಜಾರಿ,ಪ್ರಶಾಂತ್ ಪೂಜಾರಿ,ಪ್ರವೀಣ್ ಶೆಟ್ಟಿ ಮರಕಡ, ಯೋಗೀಶ್ ಶೆಟ್ಟಿ ತೇಂಜ,ಪ್ರಭಾಕರ ಆಚಾರ್ಯ ಕಂದಾವರ, ಪ್ರಸಿದ್ದ ಗಾಯಕಿ ಸೌಮ್ಯ ಭಟ್ ಕಟೀಲು,ಗೋಪಾಲಕೃಷ್ಣ ಭಟ್, ಆದಿತ್ಯ ಭಟ್, ಹಾಗೂ ಬೀಬೀಲಚ್ಚಿಲ್ ದೇವಸ್ಥಾನ ದ ಆಡಳಿತ ಮೊಕ್ತೇಸರ ಮೋನಪ್ಪ ಮೇಸ್ರಿ ಬೀಬಿಲಚ್ಚಿಲ್ ಉಪಸ್ಥಿತರಿದ್ದರು.
ಸನ್ಮಾನ
ಗಾಯಕರಾದ ವಿನಯ್ ಕುಮಾರ್ ಅದ್ಯಪಾಡಿ, ಲೋಕೇಶ್ ಕುಲಾಲ್ ಸುಂಕದಕಟ್ಟೆ, ಶಿವಾನಂದ ಬಡಗಬೆಳ್ಳೂರು,ಅಶ್ವಿನಿ ವಿನಯ್ ಕುಮಾರ್, ಸಂಕಲನ ಕಾರ ಪ್ರಸಾದ್ ಕೊಳಂಬೆ, ನಿರ್ಮಾಪಕ ಪ್ರಶಾಂತ್ ಪೂಜಾರಿ ಇವರನ್ನು ಶ್ರೀ ಲಕ್ಷ್ಮಿ ನಾರಾಯಣ ಅಸ್ರಣ್ಣರು ಸನ್ಮಾನಿಸಿದರು. ತಿಲಕ್ ಶೆಟ್ಟಿ ಬೆಲಾಡಿ ನಿರೂಪಿಸಿ,ದೇವೀಶ್ ಬೀಬಿಲಚ್ಚಿಲ್ ವಂದಿಸಿದರು