ಪೊಳಲಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ
ಕೈಕಂಬ : ಲಯನ್ಸ್ & ಲಿಯೋ ಕ್ಲಬ್ ಕಂಕನಾಡಿ ಪಡೀಲ್, ಪೊಳಲಿ ರಾಮಕೃಷ್ಣ ತಪೋವನ, ಎಸ್. ಆರ್. ಹಿಂದೂ ಫ್ರೆಂಡ್ಸ್ ಪೊಳಲಿ ಇವರ ಆಶ್ರಯದಲ್ಲಿ ಕೆ. ಎಸ್. ಹೆಗ್ಡೆ ಮೆಡಿಕಲ್ ಕಾಲೇಜು ದೇರಳಕಟ್ಟೆ ಇದರ ಸಹಯೋಗದಲ್ಲಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಸರ್ವಮಂಗಳ ಸಭಾಗೃಹದಲ್ಲಿ ಜು. ೧೬ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಶಾಸಕ ರಾಜೇಶ್ ನಾಯ್ಕ್ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಬಿರ ಉದ್ಘಾಟಿಸಿದ ಪೊಳಲಿ ರಾಮಕೃಷ್ಣ ತಪೋವನದ ಅಧ್ಯಕ್ಷ ವಿವೇಕ ಚೈತನ್ಯಾನಂದ ಸ್ವಾಮಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಇಂತಹ ಆರೋಗ್ಯ ತಪಾಸಣಾ ಶಿಬಿರ ಅಗತ್ಯವಿದೆ. ಆರೋಗ್ಯ ಉತ್ತಮವಾಗಿದ್ದಲ್ಲಿ ಜೀವನದಲ್ಲಿ ನೆಮ್ಮದಿ ಸಿಗಲಿದೆ ಎಂದರು.
ಲಯನ್ಸ್ ಪ್ರಾಂತೀಯ ಅಧ್ಯಕ್ಷ ಉಮಾ ಹೆಗ್ಡೆ, ಲಯನ್ಸ್ & ಲಿಯೋ ಕ್ಲಬ್ ಅಧ್ಯಕ್ಷ ಕರುಣಾಕರ ಎಂ. ಎಚ್, ಖಜಾಂಚಿ ಮೋಹಿನಿ ಶೆಟ್ಟಿ, ವಲಯ ಅಧ್ಯಕ್ಷ ತುಲಾರ್ ರೈ, ಕೆ. ಎಸ್. ಹೆಗ್ಡೆ ಆಸ್ಪತ್ರೆಯ ಸಾರ್ವಜನಿಕ ಆರೋಗ್ಯ ವಿಭಾಗದ ಮನುರಾಜ್ ಶೆಟ್ಟಿ, ಪೊಳಲಿ ವೆಂಕಟೇಶ ನಾವಡ, ಗ್ರಾಂ.ಪಂ.ಸದಸ್ಯ ಲೋಕೇಶ್ ಭರಣಿ , ಎಸ್. ಆರ್. ಫ್ರೆಂಡ್ಸ್ ಅಧ್ಯಕ್ಷ ರಾಜೇಶ್ , ಎಸ್ ಆರ್. ಫ್ರೆಂಡ್ಸ್ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಉಪಸ್ಥಿತರಿದ್ದರು.
ಯಶವಂತ ಪೊಳಲಿ ಸ್ವಾಗತಿಸಿ. ಸುಬ್ರಾಯ ಕಾರಂತ ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್ & ಲಿಯೋ ಕ್ಲಬ್‌ನ ಮಮತಾ ವಂದಿಸಿದರು.