ಸುಂಕದಕಟ್ಟೆಯಲ್ಲಿ ಯಕ್ಷಗಾನ ತರಭೇತಿ ಕೇಂದ್ರದ ಉಧ್ಛಾಟನೆ
ಕೈಕಂಬ: ಶ್ರೀ ನಿರಂಜನ ಸ್ವಾಮಿ ಪದವಿ ಪೂರ್ವ ಕಾಲೇಜು ಸುಂಕದಕಟ್ಟೆ ಬಜಪೆ ಇಲ್ಲಿ ದಿವಂಗತ ತಿಮ್ಮಪ್ಪ ಗುಜರನ್ ತಲಕಳ ರವರ ಸ್ಮರಣಾರ್ಥ ವಾಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಭೇತಿ ಕೇಂದ್ರವನ್ನು ಕಜೆ ಕೊಳಂಬೆ ಶ್ರೀ ಮಹಿಷಂದಾಯ ಖಂಡಿಗತ್ತಾಯ , ಪಿಲಿಚಾಮುಂಡಿ ದೈವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಶ್ರೀ ಹರಿಪ್ರಸಾದ್ ಶೆಟ್ಟಿ ಉಧ್ಛಾಟಿಸಿದರು.
ಶ್ರೀ ನಿರಂಜನ ಸ್ವಾಮಿ ಶಿಕ್ಷಣ ಸಂಸ್ಥೆ ಗಳ ಟ್ರಸ್ಟಿ ಶ್ರೀ ದೀಪಕ್ ಕೋಟ್ಯಾನ್ ಅದ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ದಲ್ಲಿ ತಲಕಳ ಕಾಶೀ ವಿಶ್ವನಾಥೇಶ್ವರ ಯಕ್ಷಗಾನ ಮಂಡಳಿಯ ಸಂಚಾಲಕರಾದ ಯೋಗಾಕ್ಷಿ ತಲಕಳ, ತರಭೇತುದಾರರಾದ ಶ್ರೇಯಾ ತಲಕಳ, ಅನನ್ಯ ಮುರನಗರ ಹಾಗೂ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಸುದಾಕರ ಶೆಟ್ಟಿ ಉಪಸ್ಥಿತರಿದ್ದರು.
ಯಕ್ಷಗಾನ ತರಭೇತಿ ಕೇಂದ್ರದ ಕಾರ್ಯದರ್ಶಿ ಯಶಸ್ವಿನಿ ವಂದನಾರ್ಪಣೆ ಗೈದರು. ಯಕ್ಷಗಾನ ಕೇಂದ್ರದ ನಿರ್ಧೇಶಕರಾದ ವಿನಯ್ ಕುಮಾರ್ ಅದ್ಯಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.