ಮೊಡಂಕಾಪು: ರೋಟರಿ ಕ್ಲಬ್ ಪದಗ್ರಹಣ, ಸನ್ಮಾನ
ಬಂಟ್ವಾಳ:ಸಮಾಜದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುವುದರ ಜೊತೆಗೆ ಶುಚಿತ್ವ ಮತ್ತು ಸಮಾಜ ಸೇವೆ ಮೂಲಕ ಗುರುತಿಸಿಕೊಂಡ ರೋಟರಿ ಕ್ಲಬ್ ಪ್ರಸಕ್ತ ಸಾಲಿನಲ್ಲಿ ಜಲ ಮರುಪೂರಣ ಮತ್ತು ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ನಿಕಟಪೂರ್ವ ಜಿಲ್ಲಾ ಗವರ್ನರ್ ಎನ್.ಪ್ರಕಾಶ ಕಾರಂತ್ ಹೇಳಿದ್ದಾರೆ.
ಇಲ್ಲಿನ ಮೊಡಂಕಾಪು ರೋಟರಿ ಕ್ಲಬ್ ವತಿಯಿಂದ ಸೋಮವಾರ ನಡೆದ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇದೇ ವೇಳೆ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧನೆ, ಸಾಧಕರಾದ ಮೊಡಂಕಾಪು ಚರ್ಚ್ ನ ಧರ್ಮಗುರು ವಲೇರಿಯನ್ ಡಿಸೋಜ, ವಗ್ಗ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಆದಂ ಸಾಹೇಬ್, ಅಂಗನವಾಡಿ ಕಾರ್ಯಕರ್ತರು ಸರೋಜಿನಿ ಇವರನ್ನು ಸನ್ಮಾನಿಸಲಾಯಿತು.
ಕ್ಲಬ್ಬಿನ ಅಧ್ಯಕ್ಷ ಪಿ.ಎ.ರಹೀಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಹಾಯಕ ಗವರ್ನರ್ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಮಾಜಿ ಅಧ್ಯಕ್ಷ ವಕೀಲ ಅಶ್ವನಿ ಕುಮಾರ್ ರೈ, ಸಲಹೆಗಾರ ಬಿ.ಸಂಜೀವ ಪೂಜಾರಿ, ವಲಯ ಸೇನಾನಿ ಸನ್ಫತ್ ಶರೀಫ್, ಮಾಜಿ ಅಧ್ಯಕ್ಷ ಇಲ್ಯಾಸ್ ಸ್ಯಾಂಕ್ಟಿಸ್ ಶುಭ ಹಾರೈಸಿದರು.