ಕಾಂಗ್ರೆಸ್ ನಿಂದ ಮೌನ ಪ್ರತಿಭಟನೆ
ಬಂಟ್ವಾಳ : ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಅವರಿಗೆ ನೀಡಿರುವ ಶಿಕ್ಷೆ ಹಾಗೂ ಲೋಕಸಭಾ ಸದಸ್ಯತ್ವ ಸ್ಥಾನದ ಅನರ್ಹತೆಯನ್ನು ಖಂಡಿಸಿ ಪಾಣೆಮಂಗಳೂರು ಹಾಗೂ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವರಾದ ಬಿ.ರಮಾನಾಥ ರೈ ಯವರ ನೇತೃತ್ವದಲ್ಲಿ ಬಿ. ಸಿ ರೋಡ್ ಮಿನಿ ವಿಧಾನಸೌಧ ಮುಂಭಾಗದಲ್ಲಿ ಮೌನ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಶೆಟ್ಟಿ, ಪ್ರಮುಖರಾದ ಅಶ್ವನಿ ಕುಮಾರ್ ರೈ ಬಿ.ಸಿ.ರೋಡು,ಬಿ.ಎಚ್.ಖಾದರ್ ಬಂಟ್ವಾಳ, ಸುದರ್ಶನ ಜೈನ್, ಪದ್ಮಶೇಖರ್ ಜೈನ್, ಲುಕ್ಮಾನ್,ಸುಭಾಶ್ಚಂದ್ರ ಕೊಳ್ನಾಡು, ಮಲ್ಲಿಕಾ ವಿ.ಶೆಟ್ಟಿ, ಸದಾಶಿವ ಬಂಗೇರ,ಅಬ್ಬಾಸ್ ಆಲಿ, ವಾಸುಪೂಜಾರಿ ಲೊರೆಟ್ಟೋ,ಪದ್ಮನಾಭ ರೈ, ಐಡಾ ಸುರೇಶ್, ಮಹಮ್ಮದ್ ಶರೀಫ್, ವೆಂಕಪ್ಪ ಪೂಜಾರಿ ಬಂಟ್ವಾಳ, ಜೆಸಿಂತ ಡಿ.ಸೋಜ, ಬಿ.ಮೋಹನ್, ಪರಮೇಶ್ವರ ಮೂಲ್ಯ, ಲೋಲಾಕ್ಷ ಶೆಟ್ಟಿ, ಮಹಮ್ಮದ್ ನಂದಾವರ, ಜೊಸ್ಪಿನ್ ಡಿಸೋಜ, ಸುರೇಶ್ ಜೋರಾ, ದಿನೇಶ್ ಶೆಟ್ಟಿ, ಪ್ರಶಾಂತ್ ಕುಲಾಲ್,ಚಿತ್ತರಂಜನ್ ಶೆಟ್ಟಿ, ಸದಾನಂದ ಶೆಟ್ಟಿ,ಜಗನ್ನಾಥ್ ತುಂಬೆ,ನಾರಾಯಣ ನಾಯ್ಕ್ ಮತ್ತಿತರರಿದ್ದರು