ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿ, ಉಭಯ ಜಿಲ್ಲೆಗಳಲ್ಲಿ ಸಮಿತಿ ರಚನೆ ಬಗ್ಗೆ ವಿಶೇಷ ಸಭೆ,
ಮುಂಬಯಿ : ಜಿಲ್ಲೆಗಳ ಅಭಿವೃದ್ದಿಗಾಗಿ ಜಿಲ್ಲೆಗಳಲ್ಲಿನ ನಿಸ್ವಾರ್ಥ ಸೇವೆ ಮಡುವ ಜನರಿಗೆ ಅವಕಾಶ ನೀಡೋಣ. ಸಮಿತಿಯಲ್ಲಿ ಜಿಲ್ಲೆಗಳ ವಿವಿಧ ಕಡೆಗಳ ಜನರು ಸೇರಿ ಅಧಿಕ ಸಂಖ್ಯೆಯಲ್ಲಿ ಜನರಿದ್ದಲ್ಲಿ ಅದು ಸಮಿತಿಗೆ ಪ್ರಯೋಜನಕಾರಿಯಾಗುದರಲ್ಲಿ ಸಂದೇಹವಿಲ್ಲ. ಜಿಲ್ಲೆಗಳಲ್ಲಿ ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿ ರಚನೆಯ ಮೂಲಕ ಜಿಲ್ಲೆಯ ಹೆಚ್ಚಿನ ಕಾರ್ಯಕರ್ತರಿಗೆ ಸೇವೆ ಮಾಡುವ ಅವಕಾಶ ಸಿಕ್ಕಿದಂತಾಗುವುದು ಎಂದು ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ರಾದ ತೋನ್ಸೆ ಜಯಕೃಷ್ಣ ಶೆಟ್ಟಿಯವರು ಅಭಿಪ್ರಾಯಪಟ್ಟರು.
ಜು. 8 ರಂದು ಬಂಟರ ಭವನ ಅನೆಕ್ಸ್ ಹಾಲ್, ಕುರ್ಲಾ ಪೂರ್ವ ಮುಂಬಯಿ ಇಲ್ಲಿ ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಸಮಿತಿಯ ಅಧ್ಯಕ್ಷರಾದ ಎಲ್. ವಿ. ಅಮೀನ್ ಅವರ ಅಧ್ಯಕ್ಶತೆಯಲ್ಲಿ ಉಭಯ ಜಿಲ್ಲೆಗಳಲ್ಲಿ ಸಮಿತಿ ರಚನೆ ಬಗ್ಗೆ ನಡೆದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಗಳ ಕೆಲವು ಸಮಸ್ಯೆಗಳ ಬಗ್ಗೆ ಮಾತನಾಡುತ್ತಾ ಉಡುಪಿ ಮಂಗಳೂರು ನಗರಗಳಲ್ಲಿನ ಒಳಚರಂಡಿಯ ವ್ಯವಸ್ಥೆಯಲ್ಲಿ ಸೂಕ್ತ ಅಭಿವೃದ್ದಿ ಕೆಲಸಗಳು ನಡೆಯಬೇಕಾಗಿದೆ.
ಯಾಕೆಂದರೆ ಇದರಿಂದ ಮಳೆಗಾಲದಲ್ಲಿ ನೀರು ನಿಲ್ಲುವುದಲ್ಲದೆ ವಾಹನ ಸಂಚಾರಕ್ಕೂ ಅಡ್ಡಿ ಉಂಟಾಗುತ್ತಿದೆ. ಜಿಲ್ಲೆಯ ಕೆಲವೆಡೆ 5 ಯಾ 10 ಸೆನ್ಸ್ ಸ್ಥಳ ಹೊಂದಿದೆ ಮಧ್ಯಮ ವರ್ಗದವರಿಗೆ ರಸ್ತೆ ಯಿಲ್ಲದ ಕಾರಣ ಮನೆ ಕಟ್ಟಲು ಅಧಿಕಾರಿಗಳು ಒಪ್ಪಿಗೆ ನೀಡದೇ ಇದ್ದು ಇದರಿಂದ ಸಾವಿರಾರು ಕುಟುಂಬಗಳು ತೊಂದರೆಯನ್ನು ಅನುಭವಿಸುತ್ತಿದೆ. ಇಂತಹ ಹಲವಾರು ಸಮಸ್ಯೆಗಳು ಜಿಲ್ಲೆಯಲ್ಲಿದ್ದು ಈ ಬಗ್ಗೆ ಸಮಿತಿಯು ಚಿಂತಿಸಬೇಕಾಗಿದೆ. ಪ್ರವಾಸೋದ್ಯಮ ಅಭಿವೃದ್ದಿಯ ಬಗ್ಗೆಯೂ ಸಮಿತಿಯು ಕ್ರೀಯಾಶೀಲವಾಗಬೇಕಾಗಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿ ಅಧ್ಯಕ್ಷರಾದ ಎಲ್. ವಿ. ಅಮೀನ್ ಅವರು ಅವಿಭಾಜಿತದಕ್ಷಿಣ ಕನ್ನಡಜಿಲ್ಲೆಗಳಲ್ಲಿ ಉಪಸಮಿತಿ ರಚನೆ ಮಾಡುದರಿಂದ ಹೆಚ್ಚಿನ ಕೆಲಸ ಮಾಡಲು ಸುಲಭವಾಗುತ್ತದೆ . ಯಾವುದೇ ವಿವಾದ ವಿಲ್ಲದೆ ಅಲ್ಲಿನ ನೂರು ಜನರನ್ನು ಸಮಿತಿಗೆ ತರುವ ಉದ್ದೇಶದೊಂದಿಗೆ ನಮ್ಮ ಸಮಿತಿಯಲ್ಲಿರುವ ವಿವಿಧ ಜಾತಿಯ ಮುಖಂಡರು ಜಿಲ್ಲೆಯ ಸಮಾಜ ಸೇವಕರನ್ನು ಸಮಿತಿಗೆ ಸೇರ್ಪಡೆಗೊಳ್ಳಲು ಸ್ಪೂರ್ತಿಯಾಗಬೇಕು. ಸಮಿತಿಯ ಮುಂದಿನ ಎಲ್ಲಾ ಯೋಜನೆಗಳು ಕಾರ್ಯರೂಪಕ್ಕೆ ತರುವಲ್ಲಿ ನಾವೆಲ್ಲರೂ ಒಂದಾಗಿ ಕ್ರೀಯಾಶೀಲರಾಗೋಣ, ಜಿಲ್ಲೆಯಲ್ಲಿ ಮಾರಕವಾಗದ ಕೈಗಾರಿಕೋದ್ಯಮಗಳು ಬರುವಂತಗಳು ನಮ್ಮ ಸಮಿತಿಯ ಸಂಪೂರ್ಣ ಬೆಂಬಲವಿದೆ ಅಲ್ಲದೆ. ರಾಜಕೀಯದ ನಿಷ್ಠಾವಂತ ರಾಜಕಾರಣಿ ಜಾರ್ಜ್ ಫರ್ನಾಂಡಿಸ್ ಹೆಸರು ಜಿಲ್ಲೆಯಲ್ಲಿ ಶಾಶ್ವತವಾಗಿ ಉ ಳಿವಂತಾಗಳು ಸಮಿತಿ ಮಹತ್ವವಾದ ನಿರ್ಧಾರವನ್ನು ಈಗಾಗಲೇ ಸರಕಾರಕ್ಕೆ ಒಪ್ಪಿಸಿದೆ. ಎರಡು ಜಿಲ್ಲೆಗಳ ಅಭಿವೃದ್ಧಿ ನಮ್ಮ ಯೋಚನೆ ಅದಕ್ಕೆ ಜಾತಿ ಸಂಘದ ಮುಖಂಡರು ನಮ್ಮೊಂದಿಗೆ ಸದಾ ಬೆಂಬಲವಾಗಿ ಇದ್ದಾರೆ ಎಂದು ಸಮಿತಿಯ ಸಂಸ್ಥಾಪಕ ಜಯಕೃಷ್ಣ ಶೆಟ್ಟಿ ಬೆಳಗಿಸಿ ಸಭೆಗೆ ಚಾಲನೆ ನೀಡಿದರು. ವೇದಿಕೆಯಲ್ಲಿ ಸಮಿತಿಯ ಜಿಲ್ಲೆಯ ಉಪಾಧ್ಯಕ್ಷ ಜಗದೀಶ್ ಅಧಿಕಾರಿ , ಗೌರವ ಕೋಶಾಧಿಕಾರಿ ತುಳಸಿದಾಸ್ ಅಮೀನ್ ಉಪಸ್ಥಿತರಿದ್ದರು,
ಗೌರವ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಸಾಲಿಯಾನ್ ಸ್ವಾಗತಿಸಿದರು, ಉಪಾಧ್ಯಕ್ಷ ನಿತ್ಯಾನಂದ ಡಿ ಕೋಟ್ಯಾನ್ ಪ್ರಾಸ್ತಾವಿಕ ಮಾತನಾಡುತ್ತಾ ಸಮಿತಿ ಪ್ರಾರಂಭದಿಂದಲೂ ಮಹತ್ತರವಾದ ನಿರ್ಧಾರಗಳನ್ನು ಮಾಡಿ ಉಭಯ ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿಯ ಕಾರ್ಯಗಳು ಸಮಿತಿ ನಡೆಸುತ್ತಾ ಬಂದಿದೆ ಮುಂದೆ ಜಿಲ್ಲೆಯಲ್ಲಿ ಸಮಿತಿ ಬಲಿಷ್ಠ ಗೊಳಿಸಿದ್ದಕ್ಕಾಗಿ ಎಲ್ಲಾ ಸಮಾಜದ ಬಂಧುಗಳನ್ನು ಸಮಿತಿಗೆ ಸೇರಿಕೊಳ್ಳುವ ಯೋಚನೆ ರೂಪಗೊಂಡಿದೆ ಎಂದು ನುಡಿದರು,
ಸಮಿತಿಯ ಜಿಲ್ಲೆಯ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ಮಾತನಾಡುತ್ತಾ ಬಹಳ ಉತ್ಸಾಹದಿಂದ ಜಿಲ್ಲೆಯ ಅಭಿವೃದ್ಧಿಯ ಕನಸು ಕಂಡು ಸ್ಥಾಪನೆ ಆಗಿರುವ ಸಮಿತಿ ಹಲವಾರು ಮಹತ್ವವಾದ ಸೇವಾ ಕಾರ್ಯಗಳನ್ನು ಜಿಲ್ಲೆಯಲ್ಲಿ ಮಾಡಿದೆ ಈ ಸಮಿತಿಯಲ್ಲಿ ಬೇರೆ ಬೇರೆ ವಿಭಾಗದಲ್ಲಿ ಸೇವೆ ಮಾಡುವ ಉನ್ನತ ವಿದ್ಯಾವಂತರು ಮತ್ತು ಪ್ರತಿಷ್ಠಿತ ಉದ್ಯಮಿಗಳು ಸದಸ್ಯತ್ವವನ್ನು ಪಡೆದಿರುವುದು ನಮಗೆಲ್ಲ ಅಭಿಮಾನ. ಸಮಿತಿಯ ಸಂಸ್ಥಾಪಕರಾದ ಜಯಕೃಷ್ಣ ಶೆಟ್ಟಿ ಅವರು ಧೈರ್ಯಶಾಲಿಯಾಗಿ ವಿವಾದವಿಲ್ಲದೆ ನೇರ ದಿಟ್ಟ ಮಾತುಗಳಿಂದ ಸಮಿತಿಯನ್ನು ಮುನ್ನಡೆಸುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿಗಾಗಿ ಸರಕಾರದ ಉನ್ನತ ಅಧಿಕಾರಿಗಳೊಂದಿಗೆ ರಾಜಕೀಯ ನಾಯಕರುಗಳೊಂದಿಗೆ ಸುದೀರ್ಘವಾಗಿ ಮಾತನಾಡಿ ಅಭಿವೃದ್ಧಿಗಾಗಿ ಬಹಳಷ್ಟು ಶ್ರಮಿಸುತ್ತಿದ್ದಾರೆ.
ಸುಮಾರು 100 ಜನರು ನಿಕ್ಕಿ ಜಿಲ್ಲೆಯಲ್ಲಿ ಸದಸ್ಯತ್ವ ನೋಂದಾಯಿಸುವ ಕಾರ್ಯ ಪ್ರಾರಂಭಗೊಂಡದ್ದು ಸಂತೋಷಕರವಾಗಿದೆ, ಇಲ್ಲಿನ ಎಲ್ಲಾ ಜಾತಿಯ ಮುಖಂಡರು ಬಹಳ ಕಷ್ಟಗಳಿಂದ ಪರಿಶ್ರಮದಿಂದ ಬೆಳೆದವರು ಅವರಿಗೆ ತಮ್ಮ ಊರು ಅಭಿವೃದ್ಧಿ ಆಗಬೇಕೆನ್ನುವ ಬಹಳಷ್ಟು ಕನಸುಗಳಿಗೆ ಆದ್ದರಿಂದ ಈ ಸಮಿತಿಯಲ್ಲಿ ಸಕ್ರಿಯರಾಗಿ ಎಲ್ಲಾ ರೀತಿಯ ಸೇವೆಗಳನ್ನು ಮಾಡುತ್ತಿದ್ದಾರೆ. ಊರು ಅಭಿವೃದ್ಧಿಗೊಂಡಾಗ ಉದ್ಯೋಗಗಳು ಸೃಷ್ಟಿಯಾಗುತ್ತದೆ. ಈ ಒಂದು ಕಾರ್ಯಕ್ಕೆ ಸರಕಾರದೊಂದಿಗೆ ಮಾತನಾಡುವುದಕ್ಕೆ ನಾನು ಕೂಡ ಶ್ರಮಿಸುತ್ತೇನೆ ಎಂದು ನುಡಿದರು..
ಸಭೆಯಲ್ಲಿ ಉಪಸ್ಥಿತರಿದ್ದ ಮೀರಾ ದಹಾಣು ಬಂಟ್ಸ್ ನ ಗೌರವ ಅಧ್ಯಕ್ಷರಾದ ಡಾ. ವಿರಾರ್ ಶಂಕರ ಶೆಟ್ಟಿಯವರು ಮಾತನಾಡುತ್ತಾ ಬಳ್ಕುಂಜೆ ಪರಿಸರದಲ್ಲಿ ಕೈಗಾರಿಕೋದ್ಯಮ ಬರುವುದಕ್ಕೆ ಸರಕಾರ ಎಲ್ಲಾ ನಿರ್ಧಾರಗಳನ್ನು ಕೈಗೊಂಡಿದ್ದು ಇದೀಗ ಕಾರ್ಯ ಸ್ಥಗಿತಗೊಳಿಸಿದೆ. ಆದ್ದರಿಂದ ಈ ಪರಿಸರದ ಜನರಿಗೆ ಬಹಳಷ್ಟು ತೊಂದರೆಗಳು ಎದುರಾಗಿದೆ. ಪರಿಸರದಲ್ಲಿ ಗಿಡಮರಗಳು ಮಾತ್ರವಿದೆ ಇಲ್ಲಿ ವಾಸ್ತವಿರುವ ಮನೆಗಳು ಕಡಿಮೆ ಇದೆ. ಸ್ವಂಥ ಜಾಗವಿರುವ ಮಾಲೀಕರೆಲ್ಲರೂ ವಿವಿಧ ರಾಜ್ಯದಲ್ಲಿದ್ದಾರೆ ಅವರು ಇಲ್ಲಿ ಯಾವುದೇ ರೀತಿಯ ಕೃಷಿ ಮತ್ತಿತರ ಕಾರ್ಯಗಳನ್ನು ನಡೆಸುವುದಿಲ್ಲ , ಇಲ್ಲಿ ಉದ್ಯಮಗಳು ಬಂದಾಗ ಪೂರ್ತಿ ಗ್ರಾಮ ಅಭಿವೃದ್ಧಿಯಾಗುತ್ತದೆ. ನಮ್ಮ ಜಿಲ್ಲೆಗಳ ಅಭಿವೃದ್ದಿಗಾಗಿ ಯಾವುದೇ ರಾಜಕೀಯವಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಸಮಾಜಸೇವಕರನ್ನು ಗುರುತಿಸಿ ಅವರಿಗೆ ಸದಸ್ಯತ್ವವನ್ನು ನೀಡಿ. ಜಿಲ್ಲೆಯ ಅಭಿವೃದ್ಧಿಗಾಗಿ ತ್ಯಾಗದ ಭಾವನೆಯಿಂದ ಸೇವೆ ಮಾಡುತ್ತಿರುವ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿ ಮತ್ತು ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಿದರು. ಊರಿನ ಅಭಿವೃದ್ದಿಗೆ ಊರಿನಲ್ಲಿನ ನಮ್ಮವರ ಸಹಕಾರ ಹಾಗೂ ಪ್ರೋತ್ಸಾಹದ ಅಗತ್ಯವಿದ್ದು, ಈ ಬಗ್ಗೆ ನಮ್ಮ ಸಮಿತಿಯ ಊರಿನವರನ್ನು ಸೇರಿಸಿ ಸಮಿತಿಯ ಎಲ್ಲಾ ಕೆಲಸಗಳು ಕಾರ್ಯರೂಪಕ್ಕೆ ತರುವಲ್ಲಿ ಯತ್ನಿಸುತ್ತಿರುವುದು ಅಭಿನಂದನೀಯ ಎಂದರು.
ಬಂಟರ ಸಂಘ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿ ಹಾಗೂ ಸಮಿತಿಯ ನಿಧಿ ಸಂಗ್ರಹ ದ ಕಾರ್ಯಾಧ್ಯಕ್ಷರಾದ ಡಾ. ಆರ್, ಕೆ, ಶೆಟ್ಟಿ ಯವರು ಮಾತನಾಡುತ್ತಾ , ಸಮಿತಿಯನ್ನು ಬಗೊಳಿಸುವ ಉದ್ದೇಶದೊಂದಿಗೆ ಜಿಲ್ಲೆಯಲ್ಲಿ ಸಮಿತಿ ರಚಿಸವಾಗಬೇಕೆನ್ನುವ ಉದ್ದೇಶ ನಮ್ಮದಾಗಿದೆ ಅದಕ್ಕಾಗಿ ಜಿಲ್ಲೆಯಲ್ಲಿ ಪ್ರತಿ ಗ್ರಾಮದ ಸಮಾಜಸೇವಕರನ್ನು ಗುರುತಿಸಿ ಸಮಿತಿಗೆ ಸೇರ್ಪಡೆಗೊಳ್ಳುಗೊಳಿಸುವುದು ಆ ಮೂಲಕ ಅವರಿಗೆ ನಮ್ಮ ಸಮಿತಿಯ ಯೋಜನೆಗಳನ್ನು ಸಮರ್ಥ ರೀತಿಯಲ್ಲಿ ತಿಳಿಸಬೇಕಾಗಿದೆ, ಈ ಸಂಸ್ಥೆಯನ್ನು ಒಬ್ಬನಿಂದ ನಡೆಸುವುದು ಅಸಾಧ್ಯ ಎಲ್ಲರೂ ಒಗ್ಗಟ್ಟಾಗಿ ಅವಿಭಾಜ್ಯ ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುವುದು ಅಗತ್ಯವಿದೆ ಎಂದು ನೋಡಿದರು
ಸಮಿತಿಯ ಉಪಾಧ್ಯಕ್ಷರಾದ, ಬಂಟರ ಸಂಘ ಮುಂಬೈಯ ಉನ್ನತ ಶಿಕ್ಷಣ ಯೋಜನೆಯ ಕಾರ್ಯ ಧ್ಯಕ್ಷ. ಸಿಎ ಐ ಅರ್ ಶೆಟ್ಟಿಯವರು ಮಾತನಾಡುತ್ತಾ ನಮ್ಮ ಸಂಘಟನೆಯಲ್ಲಿ ಉನ್ನತ ಮಟ್ಟದ ಜನರಿದ್ದು ನಾವು ಕೈಗೊಂಡ ಯಾವುದೇ ಕೆಲಸ ಯಶಸ್ಸಿಯಾಗುದರಲ್ಲಿ ಸಂದೇಹವಿಲ್ಲ. ನಿಧಿ ಸಂಗ್ರಹದ ಬಗ್ಗೆ ಮಾರ್ಗದರ್ಶನ ನೀಡುತ್ತಾ ನಾವು ಮುಂದೆ ಯಾವ ರೀತಿಯಲ್ಲಿ ಅದನ್ನು ಮುಂದುವರಿಸಬಹುದ , ಸರಕಾರದ ನಿಯಮದಂತೆ ನಮ್ಮ ಎನ್‌ಜಿಒ ನಡೆಯಬೇಕಾಗುತ್ತದೆ, ಹಣಕಾಸು ವ್ಯವಹಾರ ಮಾಡುವಾಗ ಅದಕ್ಕೆ ಹಲವಾರು ನಿಯಮಗಳಿದೆ . ನಮ್ಮ ಸಮಿತಿಯ ಸಾಮಾಜಿಕ ಸೇವೆಗಳಿಗೆ ಸಮಿತಿ ಸದಸ್ಯರು ದೇನಿಗೆ ನೀಡುವ ಮನಸ್ಸು ಬಹಳಷ್ಟು ಸಂತೋಷಕರ ಆದರೆ ಸರಕಾರದ ನಿಯಮ ಅನುಸಾರ ನಡೆಯುವುದಕ್ಕೆ ಮುಂದಿನ ದಿನಗಳಲ್ಲಿ. ಮಾರ್ಗಸೂಚಿಗಳನ್ನು ಸದಸ್ಯರಿಗೆ ತಿಳಿಸಲಾಗುವುದು ಎಂದು ನುಡಿದರು
ಮಹಾರಾಷ್ಟ್ರಕನ್ನಡಿಗ ಕಲಾವಿದರ ಪರಿಷತ್ತಿನ ಅಧ್ಯಕ್ಷ ಡಾ. ಸುರೇಂದ್ರಕುಮಾರ್ ಹೆಗ್ಡೆಯವರು ಮಾತನಾಡುತ್ತಾ ಊರಿನಲ್ಲಿ ಸಮಿತಿ ಸ್ಥಾಪಿಸುವ ಮೊದಲು ಅವರ ಜವಾಬ್ಧಾರಿ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು, ಜಿಲ್ಲೆಯಲ್ಲಿನ ಸಮಿತಿಯನ್ನು ಯಾವ ರೀತಿ ಮುಂದುವರಿಸಬಹುದೆಂದರು ಜಿಲ್ಲೆಯ ಸದಸ್ಯರಿಗೆ ಮನವರಿಕೆ ಆಗುವಂತೆ ನಾವು ಸಭೆಯನ್ನು ನಡೆಸಬೇಕಾಗಿದೆ, ಅದಕ್ಕೆ ಜಿಲ್ಲೆಯಲ್ಲಿ ಸಭೆಯನ್ನು ಬೇಕು ಎಂದು ಸಭೆಯಲ್ಲಿ ತಿಳಿಸಿದರು,
ಕರ್ನಾಟಕ ವಿಶ್ವಕರ್ಮ ಅಸೋಷಿಯೇಶನಿನ ಅಧ್ಯಕ್ಷರಾದ ಸದಾನಂದ ಆಚಾರ್ಯ ಮಾತನಾಡುತ್ತಾ ನಮ್ಮ ನಾಡನ್ನು ಉನ್ನತ ಮಟ್ಟಕ್ಕೇರಿಸುವ ಕಳಕಳಿ ನಮ್ಮೆಲ್ಲರದ್ದು, ಕೈಗಾರಿಕೋದ್ಯಮದೊಂದಿಗೆ ನಮ್ಮ ವ್ಯವಸ್ತೆ ಬಗ್ಗೆ ಗಮನ ಹರಿಸಬೇಕು. ಊರಿನ ಅಭಿವೃದ್ದಿ ಬಗ್ಗೆ ಸ್ಥಾಪನೆಯಾಗುವ ಕೈಗಾರಿಕೋದ್ಯಮವನ್ನೂ ನಾವು ಪ್ರೋತ್ಸಾಹಿಸೋಣ. ಈ ನಿಟ್ಟಿನಲ್ಲಿ ನಮ್ಮ ಸಮಿತಿಯ ಕಾರ್ಯ ಸ್ಲಾಘನೀಯ ಎಂದರು.
ಭಂಡಾರಿ ಸೇವಾ ಸಮಿತಿಯ ಅಧ್ಯಕ್ಷ ಪ್ರಭಾಕರ್ ಭಂಡಾರಿ ಯವರು ಮಾತನಾಡಿ ಮಂಗಳೂರು ವಿಮಾನ ನಿಲ್ಧಾಣಕ್ಕೆ ಜಾರ್ಜ್ ಫೆರ್ನಾಂಡಿಸ್ ರವರ ಹೆಸರನ್ನು ನೀಡಲು ಎಲ್ಲರೂ ಬಯಸುತಿದ್ದು ಅದು ಆದಷ್ಟು ಬೇಗನೆ ಕಾರ್ಯರೂಪಕ್ಕೆ ಬರಲಿ ಎಂದರು.
ಅಖಿಲ ಕರ್ನಾಟಕ ಜೈನ ಸಂಘ ಅಧ್ಯಕ್ಷ ಮುನಿರಾಜ್ ಜೈನ್ ಮಾತನಾಡುತ್ತಾ ನಾವು ಊರಲ್ಲಿ ಸಮಿತಿಯನ್ನು ಸ್ಥಾಪಿಸಿ ದೊಡ್ಡ ದೊಡ್ಡ ಜನರನ್ನು ಸೇರಿಸಿ ನಮ್ಮ ಮುಂದಿನ ಯೋಜನೆಯನ್ನು ಕಾರ್ಯರೂಪಕ್ಕೆ ತರೋಣ ಎಂದರು.
ಒಕ್ಕಲಿಗರ ಸಂಘ ಮಹಾರಾಷ್ಟ್ರದ ಅಧ್ಯಕ್ಷರಾದ ಜಿತೇಂದ್ರ ಗೌಡ ಮಾತನಾಡುತ್ತಾ ಉರಲ್ಲಿ ಕೈಗಾರೀಕರಣ ಹಾಗೂ ಮಂಗಳೂರು ವಿಮಾನ ನಿಲ್ಧಾಣಕ್ಕೆ ಜಾರ್ಜ್ ಫೆರ್ನಾಂಡಿಸ್ ರವರ ಹೆಸರನ್ನು ನೀಡುವ ಕೆಲಸ ಆದಷ್ಟು ಬೇಗನೆ ನೆರವೇರಲಿ ಎಂದರು.
ದೇವಾಡಿಗ ಸಂಘದ ಅಧ್ಯಕ್ಷ ಪ್ರವೀಣ್ ದೇವಾಡಿಗ ಮಾತನಾಡಿ ಕೈಗಾರಿಕೋದ್ಯಮದಿಂದ ದೇಶದ ಅಭಿವೃದ್ದಿಯೂ ಆಗುತ್ತಿದ್ದು ಊರಲ್ಲಿ ಕೈಗಾರಿಕೋದ್ಯಮ ಆಗುದರಲ್ಲಿ ಸಂದೇಹವಿಲ್ಲ. ವಿಮಾನ ನಿಲ್ಢಾಣದ ಪುನರ್ನಾಮಕರಣದ ಬಗ್ಗೆ ನಮ್ಮ ಸಮಾಜದ ಬೆಂಬಲ ಸದಾ ಇದೆ ಎಂದರು.
ಬಾಂಬೆ ಬಂಟ್ಸ ಅಸೋಸಿಯೇಷನ್ ಅಧ್ಯಕ್ಷ ಸಿಎ ಸುರೇಂದ್ರ ಶೆಟ್ಟಿ ಮಾತನಾಡಿ ಸಮಿತಿಯ ಸ್ಥಾಪಕ ಅಧ್ಯಕ್ಷರಾದ ತೋನ್ಸೆ ಜಯಕೃಷ್ಣ ಶೆಟ್ಟಿ ಹಾಗೂ ನಂತರದ ಅಧ್ಯಕ್ಷರುಗಳಿಗೆ ಅಭಿನಂದನೆ ಸಲ್ಲಿಸುತ್ತಾ ನಮ್ಮ ಜನ್ಮ ಭೂಮಿಯಲ್ಲಿ ಮಾಲಿನ್ಯ ರಹಿತ ಕೈಗಾರಿಕೋದ್ಯಮ ಸ್ಥಾಪನೆ ಹಾಗೂ ಮಂಗಳೂರು ವಿಮಾನ ನಿಲ್ಧಾಣಕ್ಕೆ ಜಾರ್ಜ್ ಫೆರ್ನಾಂಡಿಸ್ ರವರ ಹೆಸರಿಡುವಲ್ಲಿ ನಮ್ಮ ಪ್ರೋತ್ಸಾಹವಿದೆ ಎಂದರು.
ಮೊಗವೀರ ಪತ್ರಿಕೆಯ ಸಂಪಾದಕ ಅಶೋಕ ಸುವರ್ಣ ಮಾತನಾಡಿ ಮೊಗವೀರ ಸಮಾಜ ಬಾಂಧವರು ಹಿಂದಿನಿಂದಲೂ ಜಿಲ್ಲೆಯ ಅಭಿವೃದ್ಧಿಗಾಗಿ ಹೋರಾಟವನ್ನು ನಡೆಸುತ್ತಾ ಬಂದಿವರು, ಎಂ ಆರ್ ಪಿ ಎಲ್ ನಿಂದ ಮೊಗವೀರ ಸಮಾಜ ಬಂದುಗಳಿಗೆ ಬಹಳಷ್ಟು ತೊಂದರೆಗಳಾದಾಗ ಅದಕ್ಕೆ ಹೋರಾಟ ಮಾಡಿ ನೆನಪುಗಳನ್ನು ತಿಳಿಸುತ್ತಾ ಸಮಿತಿಯ ಯೋಚನೆಗಳಿಗೆ ನಮ್ಮ ಸದಾ ಬೆಂಬಲವಿದೆ ಎಂದರು
ಬಿಲ್ಲವರ ಅಸೋಸಿಯೇಷನ್ಅಧ್ಯಕ್ಷ ಹರೀಶ್ ಜಿ ಅಮೀನ್ ನಮ್ಮ ಊರಲ್ಲಿ ಎಲ್ಲಾ ಅನುಕೂಲತೆ ಇದ್ದು ನಮ್ಮ ಜಿಲ್ಲೆಗಳ ಅಭಿವೃದ್ದಿಗೆ ಅದು ಪೂರಕವಾಗಿದೆ. ಸರಳ ವ್ಯಕ್ತಿತ್ವದ ರಾಜ ಕಾರಿಣಿ ಜಾರ್ಜ್ ಫೆರ್ನಾಂಡಿಸ್ ಅವರ ಹೆಸರು ನಮ್ಮ ಜಿಲ್ಲೆಯಲ್ಲಿ ನಿರಂತರವಾಗಿ ಉಳಿಯುವಂತೆ ಮಾಡಬೇಕಾದದ್ದು ನಮ್ಮೆಲ್ಲರ ಕರ್ತ್ಯವ್ಯಎಂದರು,
ಬಿಲ್ಲವ ಚೇಂಬರ್ ಆಫ್ ಕೋಮರ್ಸ್ ಅಂಡ್ ಇಂಡಸ್ಟ್ರೀಸ್ ಕಾರ್ಯ ಧ್ಯಕ್ಷ ಎನ್ ಟಿ ಪೂಜಾರಿ ಮಾತನಾಡಿ ಊರಿನಲ್ಲಿನ ನಮ್ಮ ಯೋಜನೆಗಳು ಕಾರ್ಯರೂಪಕ್ಕೆ ಬರುವಲ್ಲಿ ನಮ್ಮ ಪ್ರೋತ್ಸಾಹವಿದೆ ಎಂದರು.
ಸಭೆಯಲ್ಲಿ ಪರಿಸರ ಪ್ರೇಮಿ ಸಮಿತಿಯ ಮಾಜಿ ಅಧ್ಯಕ್ಷರಾದ ಧರ್ಮಪಾಲ ದೇವಾಡಿಗ, ಹರೀಶ್ ಕುಮಾರ್ ಶೆಟ್ಟಿ,, ದೇವಾಡಿಗ ಸಂಘದ ಮಾಜಿ ಅಧ್ಯಕ್ಷರುಗಳಾದ ಎಚ್ ಮೋಹನ್ ದಾಸ್, ರವಿ ದೇವಾಡಿಗ, ವಾಸು ಎಸ್ ದೇವಾಡಿಗ,ತೀಯಾ ಸಮಾಜ ಮುಂಬಯಿಯ ಮಾಜಿ ಅಧ್ಯಕ್ಷ ಚಂದ್ರಶೇಖರ್ ಬೆಳ್ಚಡ, , ಬಾಂಬೆ ಬಂಟ್ಸ ಅಸೋಸಿಯೇಷನ್ ಉಪಾಧ್ಯಕ್ಷ ನ್ಯಾಯವಾದಿ ಡಿಕೆ ಶೆಟ್ಟಿ, ಕಾರ್ಯದರ್ಶಿ ಐಕಳ ಕಿಶೋರ್ ಶೆಟ್ಟಿ, , ಮಾಜಿ ಅಧ್ಯಕ್ಷ ಶ್ಯಾಮ್ ಎನ್ ಶೆಟ್ಟಿ , ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಸದಾ ನಂದ ಆಚಾರ್ಯ, ಮಾಜಿ ಅಧ್ಯಕ್ಷ ಜಿಟಿ ಆಚಾರ್ಯ,ಸಾಪಲ್ಯ ಸೇವಾ ಸಂಘದ ಉಪಾಧ್ಯಕ್ಷ ಕೃಷ್ಣಕುಮಾರ್ ಬಂಗೇರ,, ಜಿ ಎಸ್ ಬಿ ಸೇವಾ ಮಂಡಲದ ಜಯಪ್ರಕಾಶ್ ಕಾಮತ್,
ಪತ್ರಕರ್ತ ದಯಾಸಾಗರ ಚೌಟ, ಕರ್ನಾಟಕ ಸಂಘ ಅಂಧೇರಿಯ ಗೌರವ ಅಧ್ಯಕ್ಷರಾದ ಹ್ಯಾರಿ ಸಿಕ್ಕೇರ, ವಿದ್ಯಾದಾಹಿನಿ ಸಭಾ ದ ಗೌರವ ಪ್ರಧಾನ ಕಾರ್ಯದರ್ಶಿ ಚಿತ್ರಾಪು ಕೆ. ಎಂ. ಕೋಟ್ಯಾನ್, ಮೊಗವೀರ ಮಹಾಜನ ಸೇವಾ ಸಂಘ ಭಗ್ವಾಡಿ ಹೋಬಳಿಯ ಭಾಸ್ಕರ್ ಕಾಂಚನ್ . ಭಂಡಾರಿ ಸೇವಾ ಸಮಿತಿಯರಾಕೇಶ್ ಭಂಡಾರಿ, ಪತ್ರಕರ್ತ ವಾಣಿ ಪ್ರಸಾದ್ ಕರ್ಕೆರ ಮತ್ತಿತರ ತುಳು ಕನ್ನಡ ಸಂಘ-ಸಂಸ್ಥೆಯ ಪದಾಧಿಕಾರಿಗಳು ಅಪಾರ ಸಂಸ್ಥೆಯಲ್ಲಿ ಪಾಲ್ಗೊಂಡಿದ್ದರು.