ಆಸರೆ ಸೇವಾ ಫೌಂಡೇಶನ್ ಇದರ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಉಚಿತ ಕಣ್ಣಿನ ತಪಾಸಣಾ ಶಿಬಿರ
ಕೈಕಂಬ:ಸಾಧನೆಯನ್ನು ಸಾದಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡುವ ಈ ಸಂಸ್ಥೆಯು ಹತ್ತುದಿಕ್ಕೂಗಳಲ್ಲಿ ಪಸರಿಸಲಿ ಆಚಾರ ವಿಚಾರ ಸಾಂಪ್ರದಾಯ ಎಲ್ಲವನ್ನು ಒಟ್ಟಿಗೆ ಮಾಡಿ ತಾನು ಕಲಿತ ವಿದ್ಯೆಯನ್ನು ತನ್ನಲ್ಲೆ ಅಳವಡಿಸಿಕೊಂಡು ಮುಂದಕ್ಕೆ ತಾನು ಎನಾಗ ಬೇಕು ಎನ್ನುವುದನ್ನು ತನ್ನಲ್ಲಿ ರೂಡಿಸಿಕೊಳ್ಳುತ್ತಾರೆ. ಅದಕ್ಕೇ ತಂದೆ ತಾಯಿಯ ಹಾಗೂ ಪೋಷಕರ ಪ್ರೋತ್ಸಾಹ ಅಗತ್ಯವಿದೆ ಎಂದು ಸಹರಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಕೇಶವ ನುಡಿದರು.
ಅವರು ಪುಂಚಮೆ ಶ್ರೀ ಕಾಂಪ್ಲೆಕ್ಸ್ ನಲ್ಲಿ ಭಾನುವಾರ ಆಸರೆ ಸೇವಾ ಫೌಂಡೇಶನ್ ಇದರ ಪ್ರಾಯೋಜಕತ್ವದಲ್ಲಿ ೨.೫ ಎನ್‌ವಿಜಿ ಸುರತ್ಕಲ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಅಂಧತ್ವ ವಿಭಾಗ ಇವರ ಜಂಟಿ ಆಶ್ರಯದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ, ಪ್ರತಿಭಾ ಪುರಸ್ಕಾರ ಪಡೆಯುವ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಆಸರೆ ಸೇವಾ ಫೌಂಡೇಶನ್ ಇದರ ಸಂಸ್ಥಾಪಕ ಚಂದ್ರಹಾಸ ಪಲ್ಲಿಪಾಡಿ ಮಾತನಾಡಿ ಸಮಾಜ ಸೇವೆ ಮಾಡುವ ಉದ್ಧೇಶದಿಂದÀ ಹುಟ್ಟಿಕೊಂಡ ಆಸರೆ ಸಂಸ್ತೆಗೆ ಇದೀಗ ಐದನೇ ವರ್ಷ ಆಪ್ರಯುಕ್ತ ಮೂರು ಕಾರ್ಯಕ್ರಮ ಹಮ್ಮಿಕೊಂಡು ಕಡು ಬಡತನದಲ್ಲಿದ್ದವರಿಗೆ ಆರ್ಥಿಕ ಸಹಾಯ, ವಿದ್ಯಾರ್ಥಿಗಳ ವಿಧ್ಯಾಭ್ಯಾಸಕ್ಕೆ , ಚಿಕಿತ್ಸೆಗೆ ಇನ್ನಿತರ ಹಲಾವಾರು ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದೆ. ಸಂಸ್ತೆಯ ಸದಸ್ಯರು ತಿಂಗಳಿಗೆ ೧೦೦ ರೂಪಾಯಿಯಂತೆ ಸದಸ್ಯತನವನ್ನು ನೀಡಿ ಪ್ರತೀ ತಿಂಗಳು ಒಂದು ಕುಟುಂಬಕ್ಕೆ ಐದು ಸಾವಿರದಂತೆ ಸಹಾಯ ಹಸ್ತವನ್ನು ನೀಡಿತ್ತಾ ಬಂದಿದೆ. ಇನ್ನೂ ಮುಂದಕ್ಕೂ ಹಲಾವಾರು ಕನಸು ನನಸಾಗಲು ಸದಸ್ಯರ ಸಹಕಾರ ಅತ್ಯಗತ್ಯ ಎಂದರು.
ಅಧ್ಯಕ್ಷತೆಯನ್ನು ಶೇಖರ ಬಂಗೇರ ಗಾಣೆಮಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ೨.೫ ಎನ್‌ವಿಜಿ ಸುರತ್ಕಲ್ ಇದರ ವ್ಯವಸ್ಥಾಪಕ ಹೇಮಚಂದ್ರ, ಕರಿಯಂಗಳ ಗ್ರಾ.ಪಂ. ಉಪಾಧ್ಯಕ್ಷೆ ವೀಣಾ ಆಚಾರ್ಯ, ಉದ್ಯಮಿಗಳಾದ ಸುಕೇಶ್ ಚೌಟ ಬಡಕಬೈಲ್, ಸೈಯದ್ ಆಲಿ ಗುಂಡಿಗುಮೇರ್, ಪಿಡಬ್ಲೊಡಿ ಅಬುಬಕ್ಕರ್ ಅಮ್ಮುಂಜೆ ಆಸರೆ ಸೇವಾ ಫೌಂಡೇಶನ್ ಇದರ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕರಿಯಂಗಳ ಗ್ರಾಮ ಪಂಚಾಯತ್ ಅದ್ಯಕ್ಷರಾದ ಚಂದ್ರಹಾಸ ಪಲ್ಲಿಪಾಡಿ ಮೊದಲಾದವರು ಇದ್ದರು. ರಾಜು ಕೋಟ್ಯಾನ್ ಸ್ವಾಗತಿಸಿ,ನವಾಜ್ ಬಡಕಬೈಲ್ ಕಾರ್ಯಕ್ರಮ ನಿರೂಪಿಸಿದರು. ಬಶೀರ್ ಗಾಣೆಮಾರ್ ವಂದಿಸಿದರು.
ಬಳಿಕ ಹೇಮಚಂದ್ರ ಮತ್ತು ತಂಡದವರಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು. ಇನ್ನೂರಕ್ಕೂ ಹೆಚ್ಚು ಜನರು ಇದರ ಪ್ರಯೋಜನ ಪಡೆದುಕೊಂಡರು.