ಕುಪ್ಪೆಪದವು ದೇವಸ್ಥಾನ: ಜೂನ್ 25 ಕ್ಕೆ ದೃಡ ಕಲಶ
ಕೈಕಂಬ:ಇಲ್ಲಿನ ಶ್ರೀ ದುರ್ಗೇಶ್ವರಿ ದೇವಿ ದೇವಸ್ಥಾನದಲ್ಲಿ ಜೂನ್ 25 ರ ಭಾನುವಾರ ದೃಢಕಲಶ ಜರುಗಲಿದೆ. ಸಂಪೂರ್ಣ ಜೀರ್ಣೋದ್ದಾರಗೊಂಡ ದೇವಸ್ಥಾನದಲ್ಲಿ ಕಳೆದ ಫೆಬ್ರವರಿ 12 ರಂದು ಪುನಃ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ನಡೆದಿದ್ದು, ದೃಡ ಕಲಶ ನಡೆಸುವ ಕುರಿತಂತೆ ಸಮಾಲೋಚನಾ ಸಭೆಯು ಭಾನುವಾರ ಸಂಜೆ ದೇವಸ್ಥಾನದಲ್ಲಿ ನಡೆಯಿತು.
ಜೀರ್ಣೋದ್ದಾರದ ಕೆಲಸಗಳು ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಬ್ರಹ್ಮ ಶ್ರೀ ವೇದಮೂರ್ತಿ ರಾಧಾಕೃಷ್ಣ ತಂತ್ರಿಗಳು ಎಡಪದವು ಇವರ ನೇತೃತ್ವದಲ್ಲಿ, ಪ್ರಧಾನ ಅರ್ಚಕ ವೇದಮೂರ್ತಿ ಸದಾಶಿವ ಕಾರಂತ ಅವರ ಉಪಸ್ಥಿತಿಯಲ್ಲಿ ಜೂನ್ 25 ರಂದು ದೃಡ ಕಲಶ ನಡೆಸಲು ತೀರ್ಮಾನಿಸಲಾಯಿತು.
ದೇವಸ್ಥಾನದ ಮ್ಯಾನೇಜಿಂಗ್ ಟ್ರಷ್ಟಿ ಪ್ರವೀಣ್ ಕುಮಾರ್ ಅಗರಿ, ಪ್ರಧಾನ ಅರ್ಚಕ ಸದಾಶಿವ ಕಾರಂತ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಅಜಿತ್ ಕುಮಾರ್ ಜೈನ್, ಕಾರ್ಯದರ್ಶಿ ಅರ್ಜುನ್ ಪಂಡಿತ್, ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ಜಗದೀಶ್ ಕುಲಾಲ್ ಪಾಕಜೆ, ಕಾರ್ಯದರ್ಶಿ ಮಹಾಬಲ ಸಾಲ್ಯಾನ್, ಪ್ರಮುಖರಾದ ರಾಮಚಂದ್ರ ಸಾಲ್ಯಾನ್, ವಿನೋದ್ ಕುಮಾರ್ ಅಂಬೆಲೊಟ್ಟು, ವಿನಯ ಕಾರಂತ, ಸತೀಶ್ ಪೂಜಾರಿ ಬಳ್ಳಾಜೆ, ಶಿವರಾಮ್ ಕಾರಂತ, ಉದಯಕುಮಾರ್ ಕಂಬಳಿ, ಶೇಖರ್ ನೇಲ್ಲಚ್ಚಿಲ್, ಚಂದ್ರಶೇಖರ ತುಂಬೆ ಮಜಲ್, ಹರೀಶ್ ಸುವರ್ಣ ಅಂಬೆಲೊಟ್ಟು, ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು, ಬ್ರಹ್ಮ ಕಲಶೋತ್ಸವ ಸಮಿತಿಯ ಪದಾಧಿಕಾರಿಗಳು, ಉಪಸಮಿತಿಗಳ ಸಂಚಾಲಕರು, ಸದಸ್ಯರು ಮತ್ತು ಕಿಲೆಂಜಾರು, ಕುಲವೂರು ಹಾಗೂ ಮುತ್ತೂರು ಗ್ರಾಮಗಳ ಪ್ರಮುಖರು, ಭಕ್ತರು ಹಾಜರಿದ್ದರು.