ಬಂಟ್ವಾಳ: ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ
ನೂತನ ಸಭಾ ಭವನ ಲೋಕಾರ್ಪಣೆ
ಬಂಟ್ವಾಳ: ಸಮಾಜಮುಖಿ ಚಿಂತನೆ ಮತ್ತು ಸಾಧನೆಯ ಪಥದಿಂದ ಬಂಟ್ವಾಳ ಲಯನ್ಸ್ ಕ್ಲಬ್ ೫೦ ವರ್ಷಗಳನ್ನು ಪೂರೈಸಿದ್ದು, ಸುವರ್ಣ ಮಹೋತ್ಸವ ಆಚರಣೆ ಜೊತೆಗೆ ನೂತನ ಸಭಾ ಭವನ ಲೋಕಾರ್ಪಣೆಗೊಳಿಸಿ ಇತರರಿಗೆ ಮಾದರಿಯಾಗಿದೆ ಎಂದು ಲಯನ್ಸ್ ಅಂತರ್ ರಾಷ್ಟ್ರೀಯ ನಿರ್ದೇಶಕ ಕೆ.ವಂಶಿಧರ್ ಬಾಬು ಹೇಳಿದರು.
ಇಲ್ಲಿನ ಬಿ.ಸಿ.ರೋಡಿನಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಸೋಮವಾರ ಏರ್ಪಡಿಸಿದ್ದ ಸುವರ್ಣ ಮಹೋತ್ಸವ ಮತ್ತು ನೂತನ ಸಭಾಭವನ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.ಮಾಜಿ ನಿರ್ದೇಶಕ ವಿ.ವಿ.ಕೃಷ್ಣ ರೆಡ್ಡಿ ಶುಭ ಹಾರೈಸಿದರು. ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಆಚಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಕ್ಲಬ್ಬಿನ ಸ್ಥಾಪಕಾಧ್ಯಕ್ಷ ಡಾ.ವಸಂತ ಬಾಳಿಗಾ, ಹಿರಿಯ ಸದಸ್ಯರಾದ ಸತೀಶ್ ಕುಡ್ವ, ಡಾ. ಶ್ಯಾಮ್ ಭಟ್, ದಾನಿ ಸುಧಾಕರ್ ಆಚಾರ್ಯ, ದಾಮೋದರ ಬಿ.ಎಂ., ಸುನಿಲ್ ಬಿ.ಆಚಾರ್ಯ, ವಿಜಯ ವಿಷ್ಣು ಮಯ್ಯ, ಲಕ್ಷ÷್ಮಣ ಕುಲಾಲ್ ಅಗ್ರಬೆÊಲು, ಸಂದೀಪ್ ಆಚಾರ್ಯ, ರಾಧಾಕೃಷ್ಣ ರಾವ್ ಇವರನ್ನು ಸನ್ಮಾನಿಸಲಾಯಿತು.
ಲಯನ್ಸ್ ಜಿಲ್ಲಾ ಗವರ್ನರ್ ಸಂಜಿತ್ ಶೆಟ್ಟಿ, ಪ್ರಗತಿ ಎಸ್.ಶೆಟ್ಟಿ, ದ್ವಿತೀಯ ಉಪ ಗವರ್ನರ್ ಕುಡ್ಪಿ ಅರವಿಂದ ಶೆಣೈ, ನಿಯೋಜಿತ ಗವರ್ನರ್ ಡಾ. ಮೆಲ್ವಿನ್ ಡಿಸೋಜ, ಪ್ರಮುಖರಾದ ಬಿ.ಶಿವಾನಂದ ಬಾಳಿಗಾ, ಜಗದೀಶ್ ಬಿ.ಎಸ್, ಮಧ್ವರಾಜ್ ಬಿ.ಕಲ್ಮಾಡಿ, ಜಯಂತ್ ಶೆಟ್ಟಿ ಮತ್ತಿತರರು ಇದ್ದರು. ಮಾಜಿ ಜಿಲ್ಲಾ ಗವರ್ನರ್ ವಸಂತ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಸ್ವಾಗತಿಸಿ, ರಾಧಾಕೃಷ್ಣ ಬಂಟ್ವಾಳ್ ಕಾರ್ಯಕ್ರಮ ನಿರೂಪಿಸಿದರು.