ಶ್ರೀ ಕ್ಷೇತ್ರ ಪೊಳಲಿಯ ಜಾತ್ರಾಮಹೋತ್ಸವ ಆರಂಭ( ಮುಪ್ಪ ಪೋಪಿನಾನಿ ಗುರುವಾರ ದಿನಾತಾನಿ ಆರಡ)
ಪೊಳಲಿ:ಶ್ರೀ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜಾತ್ರಾ ಮಹೋತ್ಸವವು ಮಾ.14 ಮೀನಾ ಸಂಕ್ರಮಣದ ದಿನ ದ್ವಜಾರೋಹಣಗೊಂಡಿತು.
ಮಾ .15 ಬೆಳಗ್ಗೆ ಕಂಚಿಲುಸೇವೆ ನಡೆದ ಬಳಿಕ ಒಟ್ಟು ಎಷ್ಟು ದಿನಗಳ ಕಾಲ ಜಾತ್ರೆ ಇರಬಹುದೆಂದು ಸಾವಿರ ಸೀಮೆಯ ಭಕ್ತಾದಿಗಳು ಹಾಗೂ ಗುತ್ತಿನವರು, ಮೊಕ್ತೇಸರರು , ತಂತ್ರಿಗಳು. ಅರ್ಚಕರು, ದೇವಸ್ಥಾನದ ಮುಂಭಾಗದ ಗೋಪುರದಲ್ಲಿ ತಿಳಿದುಕೊಳ್ಳಲು ಕಾಯುತ್ತಿರುತ್ತಾರೆ.
ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ನಟ್ಟೋಜಿ ವಂಶದ ಮನೆನತನದವರು ಪುತ್ತಿಗೆಯ ಸೋಮನಾಥ ದೇವಸ್ಥಾನದ ಜೋಯಿಸರಲ್ಲಿಗೆ ಮುನ್ನಾದಿನ ತೆರಳಿ ಅಲ್ಲಿ ದಿನ ನಿಗದಿ ಮಾಡಿ ಹಿಂಗಾರದ ಹಾಳೆಯೊಂದಿಗೆ ಪೊಳಲಿಗೆ ಆಗಮಿಸುತ್ತಾರೆ.
ಅಂದು ರಾತ್ರಿ ಉಳಿಪಾಡಿಗುತ್ತಿನಿಂದ ಕೊಡಮಣಿತ್ತಾಯನ ಭಂಡಾರ ಹಾಗೂ ಶ್ರೀಕ್ಷೇತ್ರ ನಂದ್ಯ ದಿಂದಭಗವತೀ ಮಾತೆಯ ಭಂಡಾರ ಭಧ್ರಕಾಳಿ ಬಿಂಬ,ಅರಸು ದೈವದ ಆಯುಧ ಆಗಮಿಸಿದ ಬಳಿಕ ಧ್ಜಜರೋಹಣಗೊಳ್ಳುತ್ತದೆ. ಮರುದಿನ ಬೆಳಗ್ಗೆ ಕಂಚಿಲ್ ಸೇವೆ ನಡೆದ ನಂತರ ನಟ್ಟೋಜರು ಶ್ರೀ ದುರ್ಗಾ ದೇವಿ ಗುಡಿಯ ಹಿಂಬದಿಯಲ್ಲಿ ಸೇರಿಗಾರನ ಹತ್ತಿರ ಹೋಗಿ ಹಿಂಗಾರದ ಹಾಳೆಯನ್ನು ಕೈಯಲ್ಲಿ ಕೊಟ್ಟು ಆತನ ಕಿವಿಯಲ್ಲಿ ಗೌಪ್ಯವಾಗಿದ್ದ ಆರಡದ ದಿನವನ್ನು ತಿಳಿಸುತ್ತಾರೆ.
ಸೇರಿಗಾರನು ಸೋಮಕಾಸುರ ಮತ್ತು ರಂಜಕಾಸುರನು ಪ್ರಮಾಣ ಬಾವಿಗೆ ಒಂದು ಸುತ್ತು ಪ್ರದಕ್ಷಿಣೆ ಬಂದು ಗೋಪುರದ ಮುಂಬಾಗದಲ್ಲಿ ನಂದ್ಯ ಭಗವತಿ ಕ್ಷೇತ್ರದಿಂದ ಬಂದ ಭದ್ರಕಾಳಿಯ ಮೊಗ ಮೂರ್ತಿಯನ್ನು ಕದ್ರ್ ಮುಡಿಗೇರಿಸಿ ದ್ಯೆವ ದರ್ಶನ ಪಾತ್ರಿಯ ತಲೆಯ ಮೇಲೆ ಇಟ್ಟು ನಂದ್ಯದ ಮನೆತನದ ಗುರಿಕಾರ ಮೂರುಸುತ್ತು ತಿರುಗಿಸಿದ ಬಳಿಕ ಸೋಮಕಾಸುರ ಮತ್ತು ರಂಜಕಾಸುರನ ದ್ಯೆವನರ್ತನದ ಪಂಬದ ಜನಾಂಗದವರು ಗೋಪುರಕ್ಕೆ ನರ್ತನ ಮಾಡುತ್ತಾ ಬಂದು ಅರಸುದ್ಯೆವದ ಆಯುಧವನ್ನು ತಿರುಗಿಸುತ್ತಾ ನರ್ತನ ಮಾಡುತ್ತಾರೆ.
ಅಲ್ಲಿಗೆ ಸೇರಿಗಾರ ಹಿಂಗಾರ ಹಾಳೆಯನ್ನು ತಂದು ದ್ಯೆವ ನರ್ತನದಲ್ಲಿದ್ದವನ ಕೈಗೆ ಕೊಟ್ಟು ಗುಟ್ಟಾಗಿ ಕಿವಿಯಲ್ಲಿ ಆರಡದ ದಿನವನ್ನು ಆತನ ಕಿವಿಯಲ್ಲಿ ಮೆಲ್ಲನೆ ಉಸುರುತ್ತಾರೆ.
ಸಾವಿರಾರು ಮಂದಿ ಭಕ್ತರು ಗೋಪುರದ ಎದುರಲ್ಲಿ ಜಾತ್ರೆಯ ದಿನವನ್ನು ತಿಳಿದುಕೊಳ್ಳಲು ಕಾಯುತ್ತಿರುತ್ತಾರೆ. ಆಗ ದೈವಪಾತ್ರಿಯು ತುಳು ಭಾಷೆಯಲ್ಲಿ ಮುಪ್ಪ ಪೋಪಿನಾನಿ ಗುರುವಾರ ದಿನಾತಾನಿ ಆರಡ ಎಂದು ಜೋರಾಗಿ ಮೂರು ಸಲ ಕೂಗುವಾಗ ನೆರೆದಿದ್ದ ಭಕ್ತಾದಿಗಳ ಮುಖದಲ್ಲಿ ಉಲ್ಲಾಸದ ನಗುವಿನೊಂದಿಗೆ ತೆರಳುವ ದ್ರಶ್ಯ ಬಲು ಅಪರೂಪ ಎನಿಸುತ್ತದೆ. ಇದನ್ನು ‘ಕುದಿ ಲೆಪ್ಪುನಿ’ ಎನ್ನುತ್ತಾರೆ.