ಜೀವನ್‌ಧಾರಾಕೇಂದ್ರ, ಕುಲಶೇಖರ, ಮಂಗಳೂರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ಮಂಗಳೂರು:ಜೀವನ್‌ಧಾರಾಕೇಂದ್ರ ಕುಲಶೇಖರ ಇಲ್ಲಿಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸೇಕ್ರೆಡ್ ಹಾರ್ಟ್ ಆಂಗ್ಲ ಮಾದ್ಯಮ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಮಾ.09 ರಂದು ನೆರವೇರಿಸಲಾಯಿತು. ಹೊಲಿಗೆ ತರಬೇತಿಯ ವಿದ್ಯಾರ್ಥಿನಿಯರ ಪ್ರಾರ್ಥನಾಗೀತೆ ಹಾಡಿದರು. ದೀಪ ಬೆಳಗಿಸುವುದರ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ನಂತರ ಜೀವನ್‌ಧಾರಾ ಕೇಂದ್ರದ ಗತ ವರ್ಷದ ವರದಿಯನ್ನು ಕಾರ್ಯಕರ್ತರಾದ ಭಾರತಿ ಹಾಗೂ ವಿನುತಾರವರು ಮಂಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ| ಲವಿನಾ ಡಿಕುನ್ಹಾ ಪ್ರಾಂಶುಪಾಲರು, ಶ್ರೀನಿವಾಸ್ ಸಮಾಜಸೇವಾ ಅಧ್ಯಯನ ಕಾಲೇಜು, ಮಂಗಳೂರು ಇವರು ಪ್ರಸ್ತುತ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಉದ್ದೇಶವನ್ನು ವಿವರಿಸಿ ಮಹಿಳೆಯರು ಘನತೆಯ ಜೀವನವನ್ನು ರೂಪಿಸಲು ಕರೆ ನೀಡಿದರು.
ಕೆಲವು ಚಟುವಟಿಕೆ ಹಾಗೂ ಗುಂಪು ಚರ್ಚೆಯ ಮೂಲಕ ಮಹಿಳೆಯರು ಕ್ರಿಯಾಶೀಲರಾಗಲು ಪ್ರೇರೇಪಿಸಿದರು. ಸಂಪನ್ಮೂಲ ವ್ಯಕ್ತಿಯಾದ ಸತೀಶ್ ಮಾಬೆನ್, ಯೆಯ್ಯಾಡಿ ಮಂಗಳೂರು ಇವರು ಮಹಿಳೆಯರಿಗೆ ಸ್ವ ಉದ್ಯೋಗ ಮಾಡಲು ಸರಕಾರದಿಂದ ದೊರಕುವ ವಿವಿದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜೀವನ್‌ಧಾರಾ ಸಮಾಜ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿಯಾದ ಭಗಿನಿ ಅನ್ನಮರಿಯಾರವರು ಮಹಿಳೆಯಲ್ಲಿರುವ ಸಾಮರ್ಥ್ಯದ ಅರಿವು ಮೂಡಿಸಿ ಮಹಿಳೆಯರ ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡಿದರು.
ವೇದಿಕೆಯ ಕಾರ್ಯಕ್ರಮದ ನಂತರ ಭಗಿನಿ ಹೆರಿಟಾರವರು ಆಟೋಟ ಸ್ಪರ್ದೆಗಳನ್ನು ಏರ್ಪಡಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಮಹಿಳೆಯರು ನೃತ್ಯ ಹಾಗೂ ಹಾಡಿನ ಮೂಲಕ ಇತರರನ್ನು ಮನರಂಜಿಸಿದರು. ಜೀವನ್‌ಧಾರಾಕೇದ್ರದ ನಿರ್ದೇಶಕಿಯಾದ ಭಗಿನಿ ಐಡಾ ಜಾನೆಟ್ ಸ್ವಾಗತಿಸಿದರು. ಜೀವನ್‌ಧಾರಾಕೇದ್ರದ ಸಿಬ್ಬಂದಿ ಭಾರತಿ ವಂದಿಸಿದರು.
ಕುಮಾರಿ ವಿನುತಾ ಕಾರ್ಯಕ್ರಮ ನಿರೂಪಿಸಿದರು. ವಿವಿದ ಸ್ವಸಹಾಯ ಸಂಘಗಳಿಂದ ಸುಮಾರು ೧೦೦ ಮಂದಿ ಮಹಿಳೆಯರು, ಹೊಲಿಗೆ ತರಬೇತಿ ವಿದ್ಯಾರ್ಥಿನಿಯರು, ಶ್ರೀನಿವಾಸ್ ಸಮಾಜಸೇವಾ ಅಧ್ಯಯನ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದರಲ್ಲಿ ಪಾಲ್ಗೊಂಡರು.