ತೊಕ್ಕೊಟ್ಟು: “ಕೋಟಿ-ಚೆನ್ನಯ” ಕ್ರೀಡಾಕೂಟ ಸಮಾರೋಪ, “ಬ್ರಹ್ಮಶ್ರೀ ಬಿಲ್ಲವ ವೇದಿಕೆ ಬಾಳೆಪುಣಿ” ಚಾಂಪಿಯನ್
ಮಂಗಳೂರು: ಚೆಂಬುಗುಡ್ಡೆಯ ಮಂಗಳೂರು-1 ಶಾಲೆಯ ಕ್ರೀಡಾಂಗಣದಲ್ಲಿ 19ಗ್ರಾಮಗಳ ಬಿಲ್ಲವ ಸಮಾಜ ಬಾಂಧವರಿಗಾಗಿ
ಭಾನುವಾರ ನಡೆದ ಬ್ರಹ್ಮಶ್ರೀ ಬಿಲ್ಲವ ವೇದಿಕೆ ಉಳ್ಳಾಲದ 20ನೇ ವರ್ಷದ ಕೋಟಿ ಚೆನ್ನಯ ಕ್ರೀಡಾಕೂಟದಲ್ಲಿ ಬ್ರಹ್ಮಶ್ರೀ ಬಿಲ್ಲವ ವೇದಿಕೆ ಬಾಳೆಪುಣಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.ಬಿಲ್ಲವ ಸಮಾಜದ ಹಿರಿಯ ಮುಖಂಡ, ಉದ್ಯಮಿ ಉದಯ ಚಂದ್ರ ಡಿ. ಸುವರ್ಣ ವಿಜೇತ ತಂಡಕ್ಕೆ ಪ್ರಶಸ್ತಿ ವಿತರಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಕಬಡ್ಡಿ ತಂಡದ ಮಾಜಿ ನಾಯಕಿ, ತೀರ್ಪುಗಾರ್ತಿ, ಕಬಡ್ಡಿ ವಿಷಯದಡಿಯಲ್ಲಿ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಡಾ. ಶಿಲ್ಪಶ್ರೀ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಅಧ್ಯಕ್ಷ, ಕರ್ನಾಟಕ ರಾಜ್ಯ ಸರಕಾರದ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕೆ.ಟಿ. ಸುವರ್ಣ, ಕಾರ್ಯಾಧ್ಯಕ್ಷ ಸತೀಶ್ ಕರ್ಕೇರ, ಗೌರವ ಸಲಹೆಗಾರರುಗಳಾದ ಎ.ಜೆಶೇಖರ್, ಬಾಬು ಶ್ರೀ ಶಾಸ್ತ ಕಿನ್ಯ, ಸತೀಶ್ ಕುಂಪಲ ಹಾಗೂ ಕೆ.ಪಿ. ಸುರೇಶ್, ಕ್ರೀಡಾ ಕಾರ್ಯದರ್ಶಿ ರಾಜೇಶ್ ಕೆರೆಬೈಲ್, ಶಬರಿ ಟ್ರಾವೆಲ್ಸ್ ಮಾಲೀಕ ಸದಾನಂದ ಪೂಜಾರಿ, ಅಖಿಲ ಭಾರತ ಬಿಲ್ಲವರ ಯೂನಿಯನ್ ನ ಉಪಾಧ್ಯಕ್ಷ ಲೋಕನಾಥ ಅಮೀನ್, ದೀಪ ಕಂಫರ್ಟ್ ಪಾಲುದಾರ ರಾಯೀಸ್ ಅಮೀನ್, ಬಂಟ್ವಾಳ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಮಾವೆ, ದಾಸ್ ಪ್ರಮೋಟರ್ಸ್ ಆಡಳಿತ ನಿರ್ದೇಶಕ ಅನಿಲ್ ದಾಸ್, ಮೆಸ್ಕಾಂ ಅಧಿಕಾರಿ ನಿತೇಶ್ ಹೊಸಗದ್ದೆ, ಉದ್ಯಮಿ ಗಣೇಶ್ ಕೊಲ್ಯ, ತಲಪಾಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಗೋಪಾಲಕೃಷ್ಣ ಮೇಲಂಟ, ಚಂದ್ರಶೇಖರ್ ಉಚ್ಚಿಲ್, ಆನಂದ ಶೆಟ್ಟಿ ತೊಕ್ಕೊಟ್ಟು ಉಪಸ್ಥಿತರಿದ್ದರು.
ಮಂಗಳೂರು ಕ್ಷೇತ್ರ ವ್ಯಾಪ್ತಿಯ 19ಗ್ರಾಮದ ಬಿಲ್ಲವ ಸಮಾಜ ಬಾಂಧವರು ವಾಲಿಬಾಲ್, ಕ್ರಿಕೆಟ್, ಹಗ್ಗಜಗ್ಗಾಟ, ತ್ರೋಬಾಲ್, ಓಟ ಸೇರಿದಂತೆ ವಿವಿಧ ಕ್ರೀಡೆಯಲ್ಲಿ ಪಾಲ್ಗೊಂಡರು. ವಿಜೇತರಿಗೆ ಅತಿಥಿಗಳು ಪ್ರಶಸ್ತಿ ವಿತರಿಸಿದರು.
ವೇದಿಕೆಯ ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟ್ಟು ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಹರೀಶ್ ಮುಂಡೋಳಿ ವಂದಿಸಿದರು.