ರಾಜಶೇಖರ್ ಕೋಟ್ಯಾನ್ ಪನ್ಸಾಲೆ ಅವರಿಗೆ ಪ್ರಶಸ್ತಿ ಗ್ರಾಮಗಳಿಗೆ ಬಲ ತುಂಬೋಣ- ಪುನರೂರು
ಹೆಬ್ರಿ: ಗ್ರಾಮೀಣ ಪ್ರದೇಶದ ಜನರ ಜೀವನ ಮಟ್ಟ ಸುಧಾರಿಸಲು ಗ್ರಾಮಗಳಿಗೆ ಜೀವ ತುಂಬೋಣ. ಜನರಲ್ಲಿ ನೈತಿಕತೆಯನ್ನು,ಆತ್ಮ ವಿಶ್ವಾಸ ತುಂಬುವಲ್ಲಿ ಆದಿಗ್ರಾಮೋತ್ಸವ ಯಶಸ್ವಿಯಾಗಿದೆ. ಡಾ.ಶೇಖರ ಅಜೆಕಾರು ಇಂತಹ ವಿನೂತನ ಕಾರ್ಯಕ್ರಮಗಳ ಮೂಲಕ ಉತ್ತಮ ಕೆಲಸ ಮಾಡುತ್ತಾ ಬಂದಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಹೇಳಿದರು.

ಅವರು ಅಜೆಕಾರಿನ ಸೆಕ್ರೆಡ್ ಹಾರ್ಟ್ ಚರ್ಚ್ ಸಭಾಂಗಣದ ಸ್ವಾಮಿ ಬೊಬ್ಬರ್ಯ ವೇದಿಕೆಯಲ್ಲಿ ನಡೆದ ಆದಿಗ್ರಾಮೋತ್ಸವ ಗ್ರಾಮ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನಿಸಿ ಮಾತನಾಡುತ್ತಿದ್ದರು. ಸಮ್ಮೇಳನದ ಮೆರವಣಿಗೆಯನ್ನು ಉದ್ಘಾಟಿಸಿದ ಮಾಜಿ ವಿಧಾನ ಪರಿಷತ್ ಶಾಸಕ ಗಣೇಶ್ ಕಾರ್ಣಿಕ್ ಮಾತನಾಡಿ ಪ್ರತಿಯೊಬ್ಬರು ತಮ್ಮ ತಮ್ಮ ಗ್ರಾಮಗಳ ಅಭಿವೃದ್ಧಿ ಬಗ್ಗೆ ಗಮನಕೊಟ್ಟರೆ ಅದೇ ನಿಜವಾದ ದೇಶ ಸೇವೆ ಎಂದರು. ಉದ್ಯಮಿ,ಯಕ್ಷಗಾನ ಕಲಾರಂಗದ ಅಧ್ಯಕ್ಷ ವಿಜಯ ಶೆಟ್ಟಿ, ಆದಿಗ್ರಾಮೋತ್ಸವ ಸಮಿತಿಯ ಗೌರವಾಧ್ಯಕ್ಷ ಅರುಣ್ ಶೆಟ್ಟಿಗಾರ್, ಬೆಳದಿಂಗಳೂಸ್ಥಿತರಿದ್ದರು. ಚಿತ್ರನಟ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಡಾ.ರಾಜಶೇಖರ ಕೋಟ್ಯಾನ್ ಅವರಿಗೆ ಆದಿಗ್ರಾಮೋತ್ಸವ ಗೌರವ ರಾಷ್ಟ್ರಮಟ್ಟದ ಪ್ರಶಸ್ತಿ ಮತ್ತು ಜಗನ್ನಾಥಪ್ಪ ಪನ್ಸಾಲೆ ಅವರಿಗೆ ಗ್ರಾಮ ಗೌರವ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು