ಮಂಗಳೂರು: ಮಹಿಳೆಗೆ ಲೈಂಗಿಕ ಕಿರುಕುಳ
ಉಳ್ಳಾಲ: ಹಣವನ್ನು ಹಿಂತಿರುಗಿಸುವ ನೆಪದಲ್ಲಿ ಸಹೋದ್ಯೋಗಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಅನ್ಯಮತೀಯ ಯುವಕನೋರ್ವನಿಗೆ ಹಿಂದೂ ಸಂಘಟನೆಯ ಯುವಕರು ಧರ್ಮದೇಟು ನೀಡಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಂಗಳೂರು ಹೊರವಲಯದ ಉಳ್ಳಾಲ ಅಬ್ಬಂಜರ ಎಂಬಲ್ಲಿ ನಿರ್ಜನ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಡ್ಯಾರ್ ಪದವು ನಿವಾಸಿ ಮುನೀರ್ (27)ಬಂಧಿತ ಆರೋಪಿ.