ಚಲಿಸುತ್ತಿದ್ದ ಅಟೋರಿಕ್ಷಾದೊಳಗೆ ಸ್ವೋಟ : ಇದೊಂದು ಭಯೋತ್ಪಾದಕ ಕೃತ್ಯ ಎನ್ನುವುದು ಖಚಿತ! -ಡಿಜಿಪಿ
ಚಲಿಸುತ್ತಿದ್ದ ಅಟೋರಿಕ್ಷಾ ಸೊಳಗೆ ಸ್ವೋಟ ಉಂಟಾಗಿ ಪ್ರಯಾಣಿಕ ಮತ್ತು ಚಾಲಕ… ಗಾಯಗೊಂಡಿರುವ ಪುಟನೆ ನಗರದ ಕಂಕನಾಡಿ ಪೊಲೀಸ್ ಠಾಣೆ ಸಮೀಪದ ನಾಗುರಿಯಲ್ಲಿ ಶನಿವಾರ ಸಂಜೆ ಸಂಭವಿಸಿದೆರಿಕ್ಷಾದಲ್ಲಿ ಸ್ಫೋಟಗೊಂಡ ಸ್ಥಿತಿಯಲ್ಲಿ ಕುಕ್ಕರ್ ಪತ್ತೆ ಯಾಗಿದೆ. ಆಟೋರಿಕ್ಷಾದ ಒಳಗಿನ ಕೆಲವು ಭಾಗಗಳು ಸುಟ್ಟು ಹೋಗಿವೆ. ಪ್ರಯಾಣಿಕನ ಚೀಲದಲ್ಲಿದ್ದ ಪರಿಕರದಿಂದ ಬೆಂಕಿ ಹತ್ತಿಕೊಂಡಿದೆ’ ಎನ್ನಲಾಗಿದೆ. ರಿಕ್ಷಾಕ್ಕೆ ಆಟೋ ಎಲ್ ಪಿಜಿ ಕಿಟ್ ಅಳವಡಿಸಲಾಗಿತ್ತು ಬೆಂಕಿಗೆ ನಿರ್ದಿಷ್ಟ ಕಾರಣ ಗೊತ್ತಾಗಿಲ್ಲಕಂನಾಡಿ ರೈಲು ನಿಲ್ದಾಣದ ಕಡೆಯಿಂದ ಸಂಜೆ 4.30ರ ಸುಮಾರಿಗೆ ಬರುತ್ತಿದ್ದ ಆಟೋರಿಕ್ಷನಾಗುರಿ ಯಲ್ಲಿ ಓರ್ವ ಹತ್ತಿದ್ದು, ಆತ ಪಂಪ್‍ವೆಲ್ ಕಡೆಗೆ ಹೋಗುವಂತೆ ಚಾಲಕನಿಗೆ ಸೂಚಿಸಿದ್ದ.
ಆಟೋರಿಕ್ಷಾದಲ್ಲಿ ಸ್ಫೋಟದ ಸದ್ದಿನ ಬಳಿಕ ದಟ್ಟ ಹೊಗೆ ಆವರಿಸಿಕೊಂಡು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತು. ಈ ವೇಳೆ ರಸ್ತೆಯಲ್ಲಿ ವಾಹನ ದಟ್ಟಣೆ ಇತ್ತು. ಅದೃಷ್ಟವಶಾತ್ ಪಕ್ಕದಲ್ಲಿ ಸಂಚರಿಸುತ್ತಿದ್ದ. ದ್ವಿಚಕ್ರ ವಾಹನ ಸೇರಿದಂತೆ ಇತರ ವಾಹನಗಳಿಗೆ ಆಟೋರಿಕ್ಷಾ ಢಿಕ್ಕಿಯಾಗಿಲ್ಲ, ಘಟನೆಯ ದೃಶ್ಯ ಸಿಸಿ ಕೆಮರಾದಲ್ಲಿ ದಾಖಲಾಗಿದೆ.
ಪ್ರಯಾಣಿಕನ ಬ್ಯಾಗ್‍ನಿಂದ ಬೆಂಕಿ ಹತ್ತಿಕೊಂಡಿದೆ ಎಂದು ಆಟೋ ಚಾಲಕ ಹೇಳಿದ್ದು ಬೆಂಕಿಗೆ ಪ್ರಯಾಣಿಕ ಮತ್ತು ಚಾಲಕನಿಗೆ ಸುಟ್ಟಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.ಸಾರ್ವಜನಿಕರು ಆತಂಕ, ಗೊಂದಲಕ್ಕೀಡಾಗುವ ಅಗತ್ಯವಿಲ್ಲ, ಸಾಮಾಜಿಕ ಜಾಲತಾಣಗಳ ಮೂಲಕ ವದಂತಿಗಳನ್ನು ಹಬ್ಬಿಸಬಾರದು ಎಂದು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಹೇಳಿದ್ದಾರೆ.ಮಂಗಳೂರಿನ ಆಟೋ ಸ್ಫೋಟ ಪ್ರಕರಣ ಸಂಬಂಧಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದು ಆಕಸ್ಮಿಕ ಆಗಿರುವ ಘಟನೆಯಲ್ಲ, ಇದೊಂದು ಭಯೋತ್ಪಾದಕ ಕೃತ್ಯ ಎನ್ನುವುದು ಖಚಿತವಾಗಿದೆ ಎಂದು ಹೇಳಿದ್ದಾರೆ.ಭಯೋತ್ಪಾದನೆ ಕೃತ್ಯದ ಬಗ್ಗೆ ದೃಢವಾಗಿದೆ. ಆಕಸ್ಮಿಕ ರೀತಿಯಲ್ಲಿ ನಡೆದ ಘಟನೆಯಲ್ಲ. ಗಂಭೀರ ಡ್ಯಾಮೇಜ್ ಮಾಡುವ ಉದ್ದೇಶದಿಂದ ಕೃತ್ಯ ಎಸಗಲಾಗಿದೆ, ಇದೊಂದು ಭಯೋತ್ಪಾದಕ ಕೃತ್ಯ. ಕೇಂದ್ರೀಯ ಏಜನ್ಸಿಗಳ ಜೊತೆ ಸೇರಿ ರಾಜ್ಯ ಪೆÇಲೀಸರು ತನಿಖೆ ನಡೆಸಲಿದ್ದಾರೆ ಎಂದು ಡಿಜಿಪಿ ಪ್ರವೀಣ್ ಸೂದ್ ಟ್ವೀಟರ್ ನಲ್ಲಿ ಮಾಹಿತಿ ನೀಡಿದ್ದಾರೆ.