ಬಂಟ್ವಾಳ:ಇಲ್ಲಿನ ಲೊರೆಟ್ಟೋಹಿಲ್ಸ್ ಮತ್ತಿತರ ರೋಟರಿ ಕ್ಲಬ್ ಮತ್ತು ಮಂಗಳೂರು ಯಮೊಟೊ ಶೊಟೊಕಾನ್ ಕರಾಟೆ ಅಸೋಸಿಯೇಶನ್ ವತಿಯಿಂದ ಬಿ.ಸಿ.ರೋಡು ಸ್ಪರ್ಶ ಸಭಾಂಗಣದಲ್ಲಿ ಇದೇ 12 ಮತ್ತು 13ರಂದು 'ರಾಜ್ಯಮಟ್ಟದ ಕರಾಟೆ ಸ್ಪರ್ಧೆ' ನಡೆಯಲಿದೆ ಎಂದು ಸ್ಪರ್ಧೆ ಸಮಿತಿ ಗೌರವಾಧ್ಯಕ್ಷ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ ಹೇಳಿದ್ದಾರೆ.
ಬಿ.ಸಿ.ರೋಡಿನಲ್ಲಿ ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಂಗಳೂರು ಯಮೊಟೊ ಶೊಟೊಕಾನ್ ಕರಾಟೆ ಅಸೋಸಿಯೇಶನ್ ಸಹಿತ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್, ಸಿದ್ಧಕಟ್ಟೆ ಫಲ್ಗುಣಿ, ಬಿ.ಸಿ.ರೋಡು ಸಿಟಿ ಮತ್ತು ಮೊಡಂಕಾಪು ರೋಟರಿ ಕ್ಲಬ್ ವತಿಯಿಂದ ತಾಲ್ಲೂಕಿನಲ್ಲಿ ಪ್ರಥಮ ಬಾರಿಗೆ ಈ ರಾಜ್ಯಮಟ್ಟದ ಕರಾಟೆ ಸ್ಪಧರ್ೆ ಆಯೋಜಿಸಲಾಗಿದೆ ಎಂದರು. ಕಟ ಮತ್ತು ಕುಮಿಟೆ ವಿಭಾಗದಲ್ಲಿ ಸುಮಾರು 1500 ಮಂದಿ ಸ್ಪಧರ್ಿಗಳು ಭಾಗವಹಿಸಲಿದ್ದು, ಅಳಿವಿನ ಅಂಚಿನಲ್ಲಿರುವ 'ಕುಬುಡೊ ಕರಾಟೆ' ಸ್ಧೆಯೂ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಶಾಜು ಮುಲವಾನ, ಕಾರ್ಯದಶರ್ಿ ವಿಜಯ ಫೆನಾರ್ಂಡಿಸ್, ಕೋಶಾಧಿಕಾರಿ ಜೆರಾಲ್ಡ್ ಫೆನಾರ್ಂಡಿಸ್, ಜೊತೆ ಕಾರ್ಯದಶರ್ಿ ಅಶೋಕ್ ಆಚಾರ್ಯ, ಪ್ರಮುಖರಾದ ಸತೀಶ್ ಕುಮಾರ್, ಪ್ರಕಾಶ್ ಪೂಜಾರಿ ಮತ್ತಿತರರು ಇದ್ದರು.