ಬಜರಂಗದಳ ಕೃಷ್ಣಾರ್ಜುನ ಘಟಕ ತಿರುವೈಲು ಇದರ ಉದ್ಘಾಟನಾ ಸಮಾರಂಭ
ಕೈಕಂಬ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಕೃಷ್ಣಾರ್ಜುನ ಘಟಕ ತಿರುವೈಲು(ವಾಮಂಜೂರು) ಇದರ ಉದ್ಘಾಟನಾ ಸಮಾರಂಭ ಅ. ೩೦ರಂದು ತಿರುವೈಲು ಗ್ರಾಮದ ಶ್ರೀ ಅಮೃತೇಶ್ವರ ದೇವಸ್ಥಾನದ ಬಳಿ ಇರುವ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಪ್ರಾದೇಶಿಕ ರಕ್ತ ಪೂರಣ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಯಿತು.