ಬೆಂಗಳೂರು: ನಗರವಾಸಿಗಳನ್ನು ಹೈರಾಣಾಗಿಸಿರುವ ಬೆಂಗಳೂರಿನ ರಸ್ತೆಗುಂಡಿಗಳು (Bangaluru Potholes) ಇದೀಗ ಮತ್ತೊಬ್ಬ ಯುವಕನನ್ನು ಬಲಿ ಪಡೆದಿದೆ.

ಜಕ್ಕೂರು ಸಮೀಪದ ಸ್ವಾಮಿ ವಿವೇಕನಂದ ಶಾಲೆ ಬಳಿ ನಡೆದ ಕಾರು-ಬೈಕ್ ನಡುವಿನ ಅಪಘಾತದಲ್ಲಿ ಕೇರಳ (Kerala) ಮೂಲದ ಯುವಕ ಅರ್ಷದ್ ಸಾವನ್ನಪ್ಪಿದ್ದಾನೆ.
ರಸ್ತೆ ಗುಂಡಿಗೆ ಅನೇಕ ಜೀವಗಳು ಬಲಿ:
ರಸ್ತೆ ಅಪಘಾತ ಇದೇ ಮೊದಲೇನಲ್ಲ ಕಳೆದ ವಾರ ಜೆ.ಸಿ.ನಗರದ ನಿವಾಸಿಯಾಗಿರುವ 38 ವರ್ಷದ ಬಾಲಾಜಿ ಎಂಬುವರು ಯಶವಂತಪುರದ ಬಿಇಎಲ್ ಸರ್ಕಲ್ ಬೈಕ್‌ನಲ್ಲಿ ಬರುವಾಗ ರಸ್ತೆ ಗುಂಡಿಯಿಂದಾಗಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಬಿದ್ದ ರಭಸಕ್ಕೆ ಬಾಲಾಜಿಯ ಕತ್ತು, ಭುಜದ ಮೂಳೆ ಮುರಿದು ಹೋಗಿತ್ತು.
