ಮೂಲ್ಕಿ ಸೀಮೆ ಅರಸು ಕಂಬಳದ ಕರೆ ನಿರ್ಮಾಣಕ್ಕೆ ಚಾಲನೆ!
ಹಳೆಯಂಗಡಿ: ಮೂಲ್ಕಿ ಸೀಮೆ ಅರಸು ಕಂಬಳ ಸಮಿತಿ
ಸಾಮಾನ್ಯ ಸಭೆ ಶುಕ್ರವಾರ ಅರಮನೆ ಚಾವಡಿಯಲ್ಲಿ ನೆರವೇರಿತು.
ಅರಸರಾದ ದುಗ್ಗಣ್ಣ ಸಾವಂತರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಂಬಳ ಆಯೋಜನೆ ಬಗ್ಗೆ ಚರ್ಚೆ ನಡೆಯಿತು. ಅರಮನೆಯ ಬಸದಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಸಾದವನ್ನು ತಂದು ಕಂಬಳದ ಕರೆಗೆ ಹಾಕುವ ಮೂಲಕ ಕರೆ ನಿರ್ಮಾಣ ಕೆಲಸಕ್ಕೆ ಚಾಲನೆ ನೀಡಲಾಯಿತು.
ಅರಸು ಸೀಮೆ ಕಂಬಳ ಸಮಿತಿ ಅಧ್ಯಕ್ಷ ಕಿರಣ್ ಶೆಟ್ಟಿ ಕೊಲ್ನಾಡುಗುತ್ತು, ಅರಮನೆಯ ಗೌತಮ್ ಜೈನ್, ಸಮಿತಿ ಕಾರ್ಯದರ್ಶಿ ಶ್ಯಾಮ್ ಪ್ರಸಾದ್, ಕಂಬಳ ಸಮಿತಿ ಉಪಾಧ್ಯಕ್ಷರಾದ ಶಶೀಂದ್ರ ಸಾಲ್ಯಾನ್, ದಿನೇಶ್ ಸುವರ್ಣ, ಉಮೇಶ್ ಪೂಜಾರಿ, ಕೋಶಾಧಿಕಾರಿ ನವೀನ್ ಕುಮಾರ್, ವಿನೋದ್ ಸಾಲ್ಯಾನ್ ಬೆಳ್ಳಾಯರು ಮತ್ತಿತರರಿದ್ದರು.