ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ದೀಪಾವಳಿಯ ಶುಭಸಂದರ್ಭದಲ್ಲಿ ಗೋ ಪೂಜಾ ಕಾರ್ಯಕ್ರಮ
ಬಂಟ್ವಾಳ: ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವರಾದ ಶ್ರೀ ಬಿ.ರಮಾನಾಥ ರೈಯವರ ನೇತೃತ್ವದಲ್ಲಿ ಕಳ್ಳಿಗೆ ಗ್ರಾಮದ ದಿವಾಕರ ಪಂಬದಬೆಟ್ಟುರವರ ಮನೆಯಲ್ಲಿ ದೀಪಾವಳಿಯ ಶುಭಸಂದರ್ಭದಲ್ಲಿ ಗೋ ಪೂಜಾ ಕಾರ್ಯಕ್ರಮ ನಡೆಯಿತು.
ಅಗಮಿಸಿದ ಎಲ್ಲಾರನ್ನು ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅದ್ಯಕ್ಷರಾದ ಜಯಂತಿ ವಿ.ಪೂಜಾರಿ ರವರು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಮಾಜಿ ಜಿ.ಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ,ಎಂ.ಎಸ್ ಮಹಮ್ಮದ್,ಪಿಯೂಷ್ ಎಲ್ ರೋಡ್ರಿಗಸ್,ಸದಾಶಿವ ಬಂಗೇರ,ಶಿವಪ್ರಸಾದ್ ಕನಪ್ಪಾಡಿ,ರೋಶನ್ ರೈ,ಮಧುಸೂದನ್ ಶೆಣೈ,ರವಿರಾಜ್ ಜೈನ್,ಶ್ರೀಮತಿ ಮಲ್ಲಿಕಾ ಶೆಟ್ಟಿ, ವಿಲ್ಮಾ ಮೊರಸ್, ಮಂಜುಳ ಕುಶಾಲ,ಜೋಸ್ಪಿನ್ ಡಿ ಸೋಜಾ, ಐಡಾ ಸುರೇಶ್,ಗಾಯತ್ರಿ ಪ್ರಕಾಶ್,ಪ್ಪೋಸಿ ಡಿ.ಸೋಜಾ,ಮಲ್ಲಿಕಾ ಪಕ್ಕಳ,ಪ್ರೇಮಲತಾ,ಲೀನಾ,ಜೆಸಿಂತಾ ಉಪಸ್ಥಿತರಿದ್ದರು.