ಸುರತ್ಕಲ್ : ಕುಣಿತ ಭಜನಾ ಸ್ಪರ್ಧೆಯಲ್ಲಿ ಮೂಡುಶೆಡ್ಡೆ ಪ್ರಥಮ, ಉಳಾಯಿಬೆಟ್ಟು ದ್ವಿತೀಯ
ಕೈಕಂಬ : ಬಿಜೆಪಿ ಯುವ ಮೋರ್ಚಾ ಮಂಗಳೂರು ನಗರ ಉತ್ತರ ಮಂಡಲ ವತಿಯಿಂದ ಶಾಸಕ ಡಾ. ಭರತ್ ಶೆಟ್ಟಿ ಮತ್ತು ಯುವ ಮೋರ್ಚಾದ ಅಧ್ಯಕ್ಷ ಭರತ್‌ರಾಜ್ ಕೃಷ್ಣಾಪುರ ಅವರ ನೇತೃತ್ವದಲ್ಲಿ ಸುರತ್ಕಲ್ ಜಂಕ್ಷನ್‌ನಲ್ಲಿ ಅ.೨೩ರಂದು ಭಾನುವಾರ ನಡೆದ “ದೀಪಾವಳಿ ಸಂಭ್ರಮ-೨೦೨೨” ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆಯಲ್ಲಿ ಮೂಡುಶೆಡ್ಡೆಯ ಶ್ರೀ ದೇವಿ ಭಜನಾ ಮಂದಿರ ಪ್ರಥಮ ಸ್ಥಾನ ಗಳಿಸಿದರೆ, ಉಳಾಯಿಬೆಟ್ಟು ಸಾಲೆ ಶ್ರೀ ವಿಶ್ವನಾಥ ಮಹಾಗಣಪತಿ ಭಜನಾ ಸೇವಾ ಸಮಿತಿ ದ್ವಿತೀಯ ಸ್ಥಾನ ಗಳಿಸಿತು.
