ಸಾಮರಸ್ಯ ವೇದಿಕೆ ಮಂಗಳೂರು ವಿಭಾಗದ ವತಿಯಿಂದ ತುಡರ್ ಕಾರ್ಯಕ್ರಮ
ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದಿಂದ ಅರ್ಚಕರು ದೀಪ ಪ್ರಜ್ವಲಿಸಿದರು. ದೇವಳದ ಅಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಉಪಸ್ಥಿತತರಿದ್ದರು. ಪೊಳಲಿಯಿಂದ ಭಜನೆ ಮತ್ತು ಮಂಗಳ ವಾದ್ಯದೊಂದಿಗೆ ಉಪೇಕ್ಷಿತ ಬಂಧುಗಳ ಮನೆಗೆ ದೀಪದೊಂದಿಗೆ ಬಂದು ಬಡಗಬೆಳ್ಳೂರು ಬ್ರಹ್ಮ ಶ್ರೀನಾರಾಯಣ ಗುರು ಮಂದಿರದಿಂದ ಮೆರವಣಿಗೆ ಮೂಲಕ ಕಾಲ್ನಡಿಗೆಯಲ್ಲಿ ಉಪೇಕ್ಷಿತ ಬಂದುಗಳಾದ ಶೀನ ನಡ್ಯೋಡಿ ಇವರ ಮನೆಗೆ ತರಲಾಯಿತು. ಅಲ್ಲಿ ಮನೆಯ ದೇವರ ದೀಪವನ್ನು ಸ್ವಾಮೀಜಿಯವರ ದಿವ್ಯಹಸ್ತದಿಂದ ಬೆಳಗಿಸಿ ನಂತರ ಗೋಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಸ್ಥಳೀಯ ಪ್ರತಿಬೆ ಶಿವಾನಂದ ಎಂಬುವವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಾಮರಸ್ಯ ವಿಭಾಗದ ಪ್ರಮುಖರಾದ ಸುರೇಶ್ ಪರ್ಕಳ ಸಾಮರಸ್ಯದ ಸಂಧೇಶ ನೀಡಿದರು, ಪೂಜ್ಯ ವಿವೇಕ ಚೈತನ್ಯಾನಂದ ಸ್ವಾಮೀಜಿ ರಾಮಕ್ರಷ್ಣ ತಪೋವನ ಪೊಳಲಿ ಇವರು ಆಶೀರ್ವಚನ ನೀಡಿದರು, ಕಾಲೋನಿಯ ಹನ್ನೊಂದು ಮನೆಗಳಿಗೆ ಸ್ವಾಮೀಜಿಯವರಿಂದ ಭಗವದ್ಗೀತೆ ಕ್ರತಿ ಯನ್ನು ಅದರ ಮಹತ್ವ ವನ್ನು ತಿಳಿಸಿ ಹಂಚಲಾಯಿತು. ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವೆಂಕಟೇಶ್ ನಾವಡ ಪೊಳಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ನಂತರ ಮನೆಯವರ ಜೊತೆಗೆ ಪೂಜ್ಯ ಸ್ವಾಮೀಜಿಯವರ ಸಹಿತವಾಗಿ ಗಣ್ಯರೆಲ್ಲರು ಸಹಭೋಜನ ಸ್ವೀಕರಿಸಿದರು.
ಕಾರ್ಯಕ್ರಮ ದಲ್ಲಿ ಡಗಬೆಳ್ಳೂರು ಗ್ರಾ. ಪಂ. ಅದ್ಯಕ್ಷ ಪ್ರಕಾಶ್ ಆಳ್ವ ಗುಂಡಾಲ, ಉಪಾದ್ಯಕ್ಷೆ ಮಮತ, ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷ ದೇವಪ್ಪ ಪುಜಾರಿ, ಮೋಹನದಾಸ ಕೊಟ್ಟಾರಿ, ವಿಶ್ವಹಿಂದೂ ಪರಿಷತ್ ಪ್ರಮುಖರಾದ ಸುರೇಶ್ ಬೆಂಜನ್ ಪದವು, ಹಿರಿಯರಾದ ಸೋಮಶೇಖರ್ ಶೆಟ್ಟಿ ಅಮ್ಮುಂಜೆ, ಯಶವಂತ ಪೊಳಲಿ, ಕೇಶವ ಪೊಳಲಿ, ರಮೇಶ್ ಬಟ್ಟಾಜೆ, ಸನತ್ ಅಮ್ಮುಂಜೆ, ಜಯಂತ್ ಮಣಿಕಂಟಪುರ, ನಿರಂಜನ್ ಗುಂಡಿಕುಮೇರ್, ಲೋಕೇಶ್ ಪಲ್ಲಿಪಾಡಿ, ಚಂದ್ರಶೇಖರ ಕಂಡದಬೆಟ್ಟು, ಪ್ರೇಮನಾಥ್ ಕರಿಯಂಗಳ ,ರೂಪೇಶ್ ಕರಿಯಂಗಳ ಮುಂತಾದವರು ಉಪಸ್ಥಿತರಿದ್ದರು. ಮೆರವಣಿಗೆಯಲ್ಲಿ ಪೊಳಲಿ ಅಗಸ್ಥೇಶ್ವರ ಭಜನಾ ತಂಡದವರು ಭಜನೆ ಹಾಡಿದರು,
ತಾಲೂಕು ದರ್ಮ ಜಾಗರಣದ ಪ್ರಮುಖರಾದ ಸಂದೀಪ್ ಕಮ್ಮಾಜೆ ಸ್ವಾಗತಿಸಿದರು, ಜಿಲ್ಲಾ ಬಿಜೆಪಿ ಯುವಮೋರ್ಚದ ಕಾರ್ಯಕಾರಿಣಿ ಸದಸ್ಯರಾದ ಕಿಶೋರ್ ಪಲ್ಲಿಪಾಡಿ ವೈಯುಕ್ತಿಕ ಗೀತೆ ಹಾಡಿದರು, ಶ್ರೀ ಯುವರಾಜ್ ಪೂಂಜ ವಂದನಾರ್ಪಣೆ ಮಾಡಿದರು.