Published On: Tue, Oct 25th, 2022

ಮನಪಾ ತಿರುವೈಲು ೨೦ನೇ ವಾರ್ಡ್ನಲ್ಲಿ ೧೩ ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳು ಮತ್ತು ೭ ಕೋಟಿ ರೂ ಜಲಸಿರಿ ಕಾಮಗಾರಿ ಪ್ರಗತಿ

ಕೈಕಂಬ: ಮನಪಾ ತಿರುವೈಲು ೨೦ನೇ ವಾರ್ಡ್ನಲ್ಲಿ ೧೩ ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳು ಮತ್ತು ೭ ಕೋಟಿ ರೂ ಜಲಸಿರಿ ಕಾಮಗಾರಿ ಪ್ರಗತಿಯಲ್ಲಿದೆ. ಇದೀಗ ಈ ವಾರ್ಡ್ನಲ್ಲಿ ಒಟ್ಟು ೨.೬೫ ಕೋಟಿ ರೂ. ವೆಚ್ಚದಲ್ಲಿ ರಸ್ತೆ, ಚರಂಡಿ, ತಡೆಗೋಡೆ ಮತ್ತಿತರ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ನಾಗರಿಕರಿಗೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಪೂರಕ ಯೋಜನೆ ಹಮ್ಮಿಕೊಂಡಿದೆ ಎಂದು ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ ತಿಳಿಸಿದರು.

ವಾಮಂಜೂರು ಜಂಕ್ಷನ್‌ನಲ್ಲಿರುವ ಶ್ರೀ ರಾಮ ಭಜನಾ ಮಂದಿರದಲ್ಲಿ ಅ. ೨೩ರಂದು ನಡೆದ ಸರಳ ಸಭಾ ಕಾರ್ಯಕ್ರಮದ ಬಳಿಕ ಒಟ್ಟು ೨.೬೫ ಕೋ. ರೂ ಅನುದಾನದ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವಾಗ ಸ್ಥಳೀಯರ ಸಹಕಾರ ಅತ್ಯಗತ್ಯ. ರಾಜಕಾಲುವೆಗಳ ಅಭಿವೃದ್ಧಿಗಾಗಿ ಅನುದಾನ ತರಲಾಗುವುದು. ಕುಡಿಯುವ ನೀರಿನ ಸಂಪರ್ಕಕ್ಕೂ ಪ್ರತ್ಯೇಕ ಯೋಜನೆ ಪ್ರಗತಿಯಲ್ಲಿದೆ. ಈ ಭಾಗದಲ್ಲಿ ಸ್ಥಳೀಯ ಕಾರ್ಪೊರೇಟರ್ ಚುರುಕಿನ ಕೆಲಸ ಮಾಡುತ್ತಿದ್ದಾರೆ ಎಂದರು.

ಪರಸ್ಪರ ಧರ್ಮ ಒಪ್ಪಬೇಕು : ಡಾ. ಶೆಟ್ಟಿ
ಯಾರೇ ಇರಲಿ ಪರಸ್ಪರರು ಇತರ ಧರ್ಮ ಒಪ್ಪಬೇಕು. ಇತರರೂ ಅನ್ಯ ಧರ್ಮ ಒಪ್ಪಬೇಕು ಮತ್ತು ಅದಕ್ಕೆ ಗೌರವ ನೀಡಬೇಕು. ಹೀಗೆ ಪರಸ್ಪರ ಅನ್ಯೋನ್ಯತೆಯಿಂದ ಇದ್ದರೆ ಸಮಾಜದಲ್ಲಿ ಸೌಹಾರ್ದತೆ ಸಾಧ್ಯ ಎಂದು ನಾಡಿನ ಜನತೆಗೆ ಶಾಸಕರು ದೀಪಾವಳಿ ಶುಭಾಶಯ ಬಯಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಕಾರ್ಪೊರೇಟರ್ ಹೇಮಲತಾ ರಘು ಸಾಲ್ಯಾನ್, ಬಿಜೆಪಿ ವಕ್ತಾರ ಜಗದೀಶ ಶೇಣವ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಾಜೇಶ್ ಕೊಟ್ಟಾರಿ, ರಘು ಸಾಲ್ಯಾನ್, ಅನಿಲ್ ರೈ ವಾಮಂಜೂರು, ಸ್ಥಳೀಯ ಬಿಜೆಪಿ ಪ್ರಮುಖರು, ಪಕ್ಷ ಕಾರ್ಯಕರ್ತರು, ಪರಿಸರವಾಸಿಗಳು ಉಪಸ್ಥಿತರಿದ್ದರು. ಬಿಜೆಪಿ ಮುಖಂಡ ಲಕ್ಷö್ಮಣ್ ಶೆಟ್ಟಿಗಾರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ತೊಪೆಕಲ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯನ್ನು ಶಾಸಕರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರು ಶಾಸಕರು ಮತ್ತು ಹೇಮಲತಾ ಆರ್ ಸಾಲ್ಯಾನ್ ಅವರನ್ನು ಶಾಲು ಹೊದಿಸಿ ಅಭಿನಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter