ರಮೇಶ್ ಶಾಂತಿ ನಿಧನ
ಮೂಡುಬಿದಿರೆ: ಇಲ್ಲಿನ ಅಯ್ಯಪ್ಪ ದೇವಸ್ಥಾನದ ಸ್ಥಾಪಕ, ಗುರುಸ್ವಾಮಿ ರಮೇಶ್ ಶಾಂತಿ(70) ಅ.22ರಂದು ಶನಿವಾರ ನಿಧನರಾದರು.
ಅವರು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಸಹಿತ ನಾಲ್ವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಜನಾರ್ದನ ಶಾಂತಿ ಕಾರ್ಕಳ ಅವರ ಶಿಷ್ಯರಾಗಿ ವೈದಿಕ, ಅರ್ಚಕರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ .ಅಯ್ಯಪ್ಪ ಸ್ವಾಮಿಯ ಭಕ್ತರಾಗಿದ್ದ ಅವರು 51 ವರ್ಷಗಳ ಕಾಲ ಹಲವಾರು ಯಾತ್ರೆಗಳನ್ನು ಕೈಗೊಂಡು 5000ಕ್ಕೂ ಅಧಿಕ ಮಂದಿಯ ವ್ರತಕ್ಕೆ ಗುರುಸ್ವಾಮಿಯಾಗಿ ಪ್ರೇರಣೆಯಾಗಿದ್ದಾರೆ.