ಪೊಳಲಿಯಲ್ಲಿ ಗೋ ನವರಾತ್ರಿ ಉತ್ಸವದ ಗೋ ರಥ ಯಾತ್ರೆ
ಕೈಕಂಬ: ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಮತ್ತು ಗೋ ಸೇವಾ ಗತಿವಿಧಿ ಕರ್ನಾಟಕ ಇವರ ಸಂಯುಕ್ತ ಆಶ್ರಯದಲ್ಲಿ ಅ.೨೬ ರಿಂದ ನ.೩ ರ ತನಕ ಬಂಟ್ವಾಳ ತಾಲೂಕು ಪುದು ಗ್ರಾಮದ ಬ್ರಹ್ಮಗಿರಿ ಗೋವಿನ ತೋಟದಲ್ಲಿ ಭಕ್ತಿಭೂಷಣ್ ದಾಸ್ ಪ್ರಭುಜೀ ಅವರ ನೇತೃತ್ವದಲ್ಲಿ ಗೋ ನವರಾತ್ರಿ ಉತ್ಸವ ನಡೆಯಲಿದ್ದು, ಅದರ ಅಂಗವಾಗಿ ತಾಲೂಕಿನಾದ್ಯಂತ ಆಯೋಜಿಸಲಾದ ಸಂಚಾರ ಹೊರಟ ಗೋರಥ ಯಾತ್ರೆಯು ಶ್ರೀ ಕ್ಷೇತ್ರ ಪೊಳಲಿಗೆ ಆಗಮಿಸಿದ ಸಂದರ್ಭದಲ್ಲಿ ವೆಂಕಟೇಶ್ ನಾವಡ ಪೊಳಲಿ ಗೋವಿನಿಂದ ನಮಗೆ ಹಲವಾರು ಉಪಯೋಗಗಳಿವೆ ಗೋವುಗಳನ್ನು ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯ ಎಂದರು.
ವಿವೇಕ ಚೈತನ್ಯಾನಂದ ಸ್ವಾಮೀಜಿ ಶ್ರೀಕೃಷ್ಣ ಹೇಗೆ ಗೋವುಗಳನ್ನು ಪ್ರೀತಿಸುತ್ತಿದ್ದರು ಹಾಗೆಯೆ ನಾವು ಪ್ರೀತಿಸಿದರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.
ರಾಮಕೃಷ್ಣ ತಪೋವನದ ವಿವೇಕ ಚೈತನ್ಯನಂದ ಸ್ವಾಮೀಜಿ, ಭಕ್ತಿ ಭೂಷನ್ ದಾಸ್ ಪ್ರಭುಜಿ, ವೆಂಕಟೇಶ್ ನಾವಡ ಪೊಳಲಿ, ಯಾದವ, ಕಿಶೋರ್, ಪದ್ಮನಾಭ, ನವೀನ್, ಅನಿಲ್ ಪಂಡಿತ್, ಲೋಕೇಶ್, ಚಂದ್ರಹಾಸ್ ಪಲ್ಲಿಪಾಡಿ, ಸಂದೀಪ್ ಪೊಳಲಿ, ಯಶವಂತ್ ಪೊಳಲಿ ಬಾಬಣ್ಣ ಮತ್ತಿತರರರು ಉಪಸ್ಥಿತರಿದ್ದರು.