*ಸಾಹಿತ್ಯ ಸಮ್ಮೇಳನ: ಪುಸ್ತಕ ಬಿಡುಗಡೆಗೆ ಅವಕಾಶ*
ಬಂಟ್ವಾಳ: ಬಂಟ್ವಾಳದ ಪೊಳಲಿ ಸಮೀಪ ಅಮ್ಮುಂಜೆ ಗ್ರಾಮದ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನವಂಬರ್ 12 ಮತ್ತು 13 ರಂದು ಜರಗಲಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳ,ಬರೆಹಗಾರರ ಪುಸ್ತಕಗಳನ್ನು ಬಿಡುಗಡೆ ಗೊಳಿಸಲು ಅವಕಾಶ ಕಲ್ಪಿಸಲಾಗುವುದು.
ಯಾರಾದರೂ ಪುಸ್ತಕ ರಚಿಸಿ ಸಿದ್ದಗೊಳಿಸಿದ್ದಲ್ಲಿ ಅ.22ರ ಮುಂಚಿತವಾಗಿ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ವಿಶ್ವನಾಥ್ ಬಂಟ್ವಾಳ ಇವರನ್ನು ಸಂಪರ್ಕುಸಲು ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9845240931 ನ್ನು ಸಂಪರ್ಕಿಸ ಬಹುದು