ಕಾಂತಾರ ಪ್ರಭಾವ ದೈವ ನರ್ತಕರಿಗೆ ಭರ್ಜರಿ ಸಿಹಿ ಸುದ್ದಿ, ದೈವ ನರ್ತನ ಮಾಡುವರಿಗೆ ಮಾಸಾಶನ ಕೊಡಲು ತೀರ್ಮಾನ
ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಅವರು ದೈವ ನರ್ತನ ಮಾಡುವರಿಗೆ ಮಾಸಾಶನ ಕೊಡಲು ತೀರ್ಮಾನ ಮಾಡಿದೆ ಎಂದು ಘೋಷಣೆ ಮಾಡಿದ್ದಾರೆ. 60 ವರ್ಷ ಮೇಲ್ಪಟ್ಟ ದೈವನರ್ತನ ಮಾಡುವವರಿಗೆ ಮಾಸಾಶನ ನೀಡಲು ಈ ಯೋಜನೆಯನ್ನು ಹಾಕಿಕೊಂಡಿದೆ. ಪ್ರತಿ ತಿಂಗಳು 2 ಸಾವಿರ ರೂ. ಮಾಸಾಶನ ಕೊಡಲು ನಿರ್ಧಾರ ಮಾಡಲಾಗಿದೆ.
ಕನ್ನಡ ಚಿತ್ರರಂಗದಲ್ಲಿ ಭಾರೀ ದೊಡ್ಡ ಅಲೆಯನ್ನು ಸೃಷ್ಟಿ ಉಂಟು ಮಾಡಿದ ಕಾಂತಾರ ಸಿನಿಮಾ ಭಾರೀ ಪ್ರಶಂಸೆಗಳನ್ನು ಪಡೆದು ದಾಪುಗಾಲು ಇಟ್ಟು ಇನ್ನೂ ಮುನ್ನುಗ್ಗುತ್ತಲೇ ಇದೆ. ಈ ಸಿನಿಮಾದಲ್ಲಿ ದೈವ ನರ್ತಕ ಕಷ್ಟಗಳನ್ನು ಅಥವಾ ಆ ಒಂದು ಸಮುದಾಯದ ಜನರ ಬವಣೆಗಳನ್ನು ತಿಳಿಸುವ ಪ್ರಯತ್ನ ಮಾಡಿತ್ತು ಎಂದು ಹೇಳಬಹುದು. ಇದೀಗ, ಇದೇ ಸಂದರ್ಭದಲ್ಲಿ ಸರ್ಕಾರ ದೈವ ನರ್ತಕರ ಕಷ್ಟಕ್ಕೆ ಮತ್ತು ಬೇಡಿಕೆಯನ್ನು ಒಪ್ಪಿಕೊಂಡು ದೈವ ನರ್ತನ ಮಾಡುವರಿಗೆ ಪ್ರತಿ ತಿಂಗಳು 2 ಸಾವಿರ ರೂ. ಮಾಸಾಶನ ನೀಡಲು ಸರಕಾರ ನಿರ್ಧಾರ ಮಾಡಿದೆ.