ಮಂಚಿ: ೨೨ರಂದು ಕನಕ ಸಭಾ ಮಂಟಪ ಲೋಕಾರ್ಪಣೆ
ಬಂಟ್ವಾಳ: ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಿರುವ ಕನಕಗಿರಿ ಶ್ರೀ ಗೋಪಾಲಕೃಷ್ಣ ಸೇವಾ ವಿಶ್ವಸ್ಥ ಮಂಡಳಿ ನಿರ್ಮಿಸಿದ ‘ಕನಕ ಸಭಾ ಮಂಟಪ ಮತ್ತು ಪಾಕ ಶಾಲೆ’ ಇದೇ ೨೨ ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ವಿಶ್ವಸ್ಥ ಮಂಡಳಿ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಹೇಳಿದ್ದಾರೆ.
ಬಿ.ಸಿ.ರೋಡಿನಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ೪೨ ವರ್ಷಗಳಿಂದ ಹಿಂದು ಸಂಘಟನೆ ಸಹಿತ ಗೋಶಾಲೆ ಮತ್ತು ಜಾಗೃತಿಗಾಗಿ ವಿಶ್ವಸ್ಥ ಮಂಡಳಿ ಶ್ರಮಿಸುತ್ತಿದೆ ಎಂದರು.
ಅಂದು ಬೆಳಿಗ್ಗೆ ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮಿ ಕನಕ ಸಭಾ ಮಂಟಪ ಉದ್ಘಾಟಿಸಲಿದ್ದು, ಶಾಸಕ ರಾಜೇಶ ನಾಯ್ಕ್ ಉಳಿಪ್ಪಾಡಿಗುತ್ತು ಮತ್ತಿತರ ಗಣ್ಯರು ಭಾಗವಹಿಸುವರು. ಇದೇ ವೇಳೆ ಏಕಾಹ ಭಜನೆ, ಮಹಾ ಗಣಪತಿ ಹವನ, ದುರ್ಗಾ ನಮಸ್ಕಾರ ಪೂಜೆ, ಭಜನಾ ಮಂಗಳೋತ್ಸವ, ನೃತ್ಯ ವೈಭವ ನಡೆಯಲಿದ್ದು, ರಾತ್ರಿ ಗಂಟೆ ೮.೩೦ ಕ್ಕೆ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ತಿಳಿಸಿದರು.
ಪ್ರತಿಕಾಗೋಷ್ಠಿಯಲ್ಲಿ ಸಿ.ಎಚ್.ಸೀತಾರಾಮ ಶೆಟ್ಟಿ, ರಾಮಕೃಷ್ಣ ನಾಯಕ್ ಕೋಕಳ, ಅ.ನಾ.ಕೃಷ್ಣ ಶರ್ಮ, ವಕೀಲ ರವೀಂದ್ರ ಕುಕ್ಕಾಜೆ ಇದ್ದರು.