ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಬಂಜಾರ ಸಮಾಜ ಭವನಕ್ಕೆ ನವಿ ಮುಂಬೈಯಲ್ಲಿ ಜಮೀನು: ಮುಖ್ಯ ಮಂತ್ರಿ ಏಕನಾಥ್ ಶಿಂಧೆ
ಮುಂಬಯಿ : ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಬಂಜಾರ ಸಮಾಜಕ್ಕೆ ಭವನ ನಿರ್ಮಿಸಲು ನವಿಮುಂಬೈಯಲ್ಲಿ ಜಮೀನು ಲಭ್ಯವಾಗುವಂತೆ ಸಿಡ್ಕೋ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸಲಾಗುವುದು, ಕರ್ನಾಟಕದಿಂದ ವಲಸೆ ಬಂದ ಬಂಜಾರ ಜನರಿಗೆ ಅನೇಕ ಸೌಲಭ್ಯ ಸೌಕರ್ಯವನ್ನು ನೀಡಲಾಗುವುದು. ಬಂಜಾರ ಜನರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಮೀಸಲಾತಿಯನ್ನು ನೀಡಬೇಕೆಂದು ಮನವಿ ಮಾಡಲಾಗಿದೆ.

ವರ್ತಮಾನದ ಸಮಯದಲ್ಲಿ ಬಂಜಾರ ಸಮಾಜಕ್ಕೆ ಬೇಕಾಗಿರುವ ಸೌಲಭ್ಯವನ್ನು ತಕ್ಷಣ ಉಪಲಬ್ದ ಮಾಡಬೇಕು. ಬಿಕ್ಕಟ್ಟಿನ ಸಮಯದಲ್ಲಿ ನನ್ನ ಸಹೋದರೊಂದಿಗೆ ನಿಲ್ಲುವುದು ನನ್ನ ಕರ್ತವ್ಯವಾಗಿದೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಭರವಸೆಯನ್ನಿತ್ತರು.

ಅಖಿಲ ಭಾರತ ಬಂಜಾರ ಸೇವಾ ಸಂಘ ಕಳೆದ ಭಾನುವಾರ ಥಾಣೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿಂಧೆ ಮಾತನಾಡಿದರು.

ಬಂಜಾರ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ. ಶಂಕರ್ ಪವಾರ್ ಮತ್ತು ಸಚಿವ ಸಂಜಯ್ ರಾಥೋಡ್ ಬಿಜೆಪಿ ಮುಖ್ಯಸ್ಥರು, ಲೋಕಸಭೆಯ ಮುಖಂಡರು ಆದ ಡಾ. ಉಮೇಶ್ ಜಾದವ್ ಮುಂತಾದವರು ಮುಖ್ಯಮಂತ್ರಿ ಅವರಿಗೆ ಭವ್ಯವಾದ ಸ್ವಾಗತವನ್ನಿತ್ತು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಆಗಮಿಸಿದ್ದು ಅವರನ್ನೂ ಸನ್ಮಾನಿಸಲಾಯಿತು. ಮಹಾರಾಷ್ಟ್ರದ ಅಭಿವೃದ್ಧಿಗೆ ಬಂಜಾರ ಸಮುದಾಯ ಸಾಕಷ್ಟು ಕೊಡುಗೆ ನೀಡಿದೆ ಎಂದು ಫಡ್ನಿವೀಸ್ ಕೊಂಡಾಡಿದರು.

ಮಹಾರಾಷ್ಟ್ರ, ಮಧ್ಯಪ್ರದೇಶ ಕರ್ನಾಟಕ , ಆಂಧ್ರಪ್ರದೇಶಗಳಿಂದ ಸುಮಾರು 40 ಸಾವಿರ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಅನೇಕ ಬಂಜಾರ ಸಂಸ್ಕೃತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಲಾಯಿತು.

ಡಾಕ್ಟರ್ ಉಮೇಶ್ ಜಾದವ್ ಮತ್ತು ಡಾ ಶಂಕರ ಪವಾರ ಕಾರ್ಯಕ್ರಮ ಆಯೋಜಿಸಿದ್ದು,ಮಹಾರಾಷ್ಟ್ರದ ಕ್ಯಾಬಿನೆಟ್ ಸಚಿವ ಸಂಜಯ ರಾಥೋಡ್ ಉಪಸ್ಥಿತರಿದ್ದರು. ಕಪಿಲ್ ಪಟೇಲ್, ರಥಿ ಮಹಾರಥಿ, ಬಂಜಾರ ಸೇವೆಯ ಸಮಾಜದ ಜ್ಞಾನಿ ಸೇವಕರು ಉಪಸ್ಥಿತರಿದ್ದರು. ರಾಮು ರಾಥೋಡ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

