ಸದಾಶಿವ ಸಪಲ್ಯ ನಿಧನ
ಬಂಟ್ವಾಳ: ಭಂಡಾರಿಬೆಟ್ಟು ನಿವಾಸಿ, ದಿವಂಗತ ಕೊಗ್ಗ ಶೇರಿಗಾರ್ ಇವರ ಪುತ್ರ ಸದಾಶಿವ ಸಪಲ್ಯ (೭೭) ಇವರು ಅಸೌಖ್ಯದಿಂದ ಅ.17ರಂದು ಸೋಮವಾರ ಮುಂಜಾನೆ ನಿಧನರಾದರು.
ಮೃತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. ಗಣೇಶ ಬೀಡಿ ಸಂಸ್ಥೆ ಗುತ್ತಿಗೆದಾರರಾಗಿ ವಿವಿಧ ಸಾಮಾಜಿಕ ಮತ್ತು ಧಾರ್ಮಿಕ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು. ಮೃತರ ಅಂತ್ಯಕ್ರಿಯೆ ಬಡ್ಡಕಟ್ಟೆ ಹಿಂದೂ ರುದ್ರಭೂಮಿಯಲ್ಲಿ ಸೋಮವಾರ ಬೆಳಿಗ್ಗೆ ನೆರವೇರಿತು.