ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಪತ್ತೆಯಾದ ಶವದ ಗುರುತು ಪತ್ತೆ
ಬಂಟ್ವಾಳ: ಇಲ್ಲಿನ ಸರಪಾಡಿ ಸಮೀಪದ ನೇತ್ರಾವತಿ ನದಿಯಲ್ಲಿ ಅ.09ರಂದು ಭಾನುವಾರ ಪತ್ತೆಯಾದ ಅಪರಿಚಿತ ಮಹಿಳೆ ಶವದ ಗುರುತು ಪತ್ತೆಯಾಗಿದೆ. ಮೃತರನ್ನು ಮಂಗಳೂರಿನ ಕದ್ರಿ ರುದ್ರಭೂಮಿ ರಸ್ತೆ ನಿವಾಸಿ ಶ್ರೀರಂಗ ಐತಾಳ್ ಇವರ ಪತ್ನಿ ಸುಮತಿ (೫೯) ಎಂದು ಗುರುತಿಸಲಾಗಿದ್ದು, ಶವವನ್ನು ವಾರೀಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.