ಬಿ.ಸಿ.ರೋಡು: ಇಂದು ಕೆಲವೆಡೆ ವಿದ್ಯುತ್ ವ್ಯತ್ಯಯ
ಬಂಟ್ವಾಳ: ಇಲ್ಲಿನ ಬ್ರಹ್ಮರಕೂಟ್ಲು ಎಂಬಲ್ಲಿ ೧೧೦ ಕೆವಿ ಸಾಮರ್ಥ್ಯದ ವಿದ್ಯುತ್ ಲೈನಿನಲ್ಲಿ ೩೩ ಕೆವಿ ಡಬ್ಬಲ್ ಸರ್ಕ್ಯೂಟ್ ನಿರ್ಮಾಣ ಕಾಮಗಾರಿ ಅ.೧೧ರಂದು ಮಂಗಳವಾರ ನಡೆಯಲಿದೆ.
ಇದರಿಂದಾಗಿ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ಗಂಟೆ ೬ರ ತನಕ ಬಿ.ಸಿ.ರೋಡು ನಗರ, ತುಂಬೆ, ಕಳ್ಳಿಗೆ, ಪುದು, ಮೇರಮಜಲು, ಸಜಿಪಮುನ್ನೂರು, ಸಜಿಪಮೂಡ, ಸಜಿಪನಡು, ಸಜಿಪಪಡು, ಚೇಳೂರು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.