ಬಸವರಾಜ ಬೊಮ್ಮಾಯಿ RSS ಕೈಗೊಂಬೆ- ಸಿದ್ದರಾಮಯ್ಯ ವಾಗ್ದಾಳಿ
ರಾಯಚೂರು: ಸಿಎಂ ಬಸವರಾಜ ಬೊಮ್ಮಾಯಿ ಅವರು ಆರ್‌ಎಸ್‌ಎಸ್‌ನ ಕೈಗೊಂಬೆಯಾಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ರಾಯಚೂರಿನಲ್ಲಿ ಕಾಂಗ್ರೆಸ್ (Congress) ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿರುವ ಅವರು, ಬಿಜೆಪಿ (BJP) ಅವರು ಮಾತೆತ್ತಿದ್ರೆ ಸಿದ್ದರಾಮಯ್ಯನನ್ನ ಬೈತಾರೆ. ಚಿಕ್ಕಬಳ್ಳಾಪುರದಲ್ಲಿ ನನ್ನ ಬೈಯೋದಕ್ಕೇ ಕಾರ್ಯಕ್ರಮ ಮಾಡಿದ್ರು. ನೋಡಿ ನನ್ನ ಕಂಡ್ರೆ ಎಷ್ಟು ಭಯ. ಬಿಜೆಪಿಯವರು ನನ್ನೊಬ್ಬನನ್ನೇ ಟೀಕೆ ಮಾಡೋದು. ಏಕೆಂದರೆ ನಾನೊಬ್ಬನೇ ಆರ್‌ಎಸ್‌ಎಸ್ ಹಾಗೂ ಮೋದಿಯವರ (Narendra Modi) ಬಗ್ಗೆ ಮಾತಾಡೋದು ಎಂದು ಕುಟುಕಿದ್ದಾರೆ.

ರಾಜ್ಯ ಹಾಗೂ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ, ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಗುತ್ತಿಗೆದಾರರ ಸಂಘದವರು ಪ್ರಧಾನಿಗೆ (Prime Minister) ಪತ್ರಬರೆದು ವರ್ಷವಾಯಿತು. `ನಾಕಾನೆಂಗಾ ಕಾನೆದೂಂಗಾ’ ಅನ್ನೋ ಮೋದಿ ತನಿಖೆ ಮಾಡಿಸಬಹುದಿತ್ತು. 40 ಪರ್ಸೆಂಟ್ ಕಮಿಷನ್ ಕೊಡಬೇಕು ಅಂತ ಈ ಮೊದಲು ಕೇಳಿರಲಿಲ್ಲ. ನನ್ನ ಕೇಳಿದ್ದರೆ ಸಿಬಿಐಗೆ (CBI) ರೆಫರ್ ಮಾಡುತ್ತಿದೆ ಎಂದು ಹೇಳಿದ್ದಾರೆ.

ಬಿಜೆಪಿ ಅವರು ನನ್ನ ಆಡಳಿತಾವಧಿಯಲ್ಲಿ ಸಿಬಿಐ ಅನ್ನ ಚೋರ್ ಬಚಾವ್ ಸಂಸ್ಥೆ, ಕಾಂಗ್ರೆಸ್ ಇನ್ವೆಷ್ಟಿಗೇಷನ್ ಇನಸ್ಟಿಟ್ಯೂಟ್ ಅಂತಿದ್ರು. ಈಗ ಅವರ ಕೈಯಲ್ಲೇ ಸಿಬಿಐ ಇದೆ ಏನೂ ಮಾಡುತ್ತಿದ್ದಾರೆ? ಡಿಕೆ ರವಿ, ಮೇಸ್ತಾ ಕೇಸ್‌ಗಳಲ್ಲಿ ಏನು ಹೇಳಿದ್ದಾರೆ? ಸುಳ್ಳು ಆರೋಪಗಳನ್ನೇ ಮಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಸ್ಲಿಂ (Muslims) ಪರ ಸಿದ್ದು ಬ್ಯಾಟಿಂಗ್: ಹಿಜಬ್ (Hijab) ಒಂದು ವಿಷಯವೇ ಅಲ್ಲಾ, ಆಜಾನ್ ಎಷ್ಟೋ ವರ್ಷಗಳಿಂದ ಪ್ರಾರ್ಥನೆ ಮಾಡುತ್ತಾರೆ. ಹಲಾಲ್ ಅವರ ಸಂಪ್ರದಾಯ. ಈ ದೇಶ ಒಂದು ಧರ್ಮದ ಒಂದು ಸಂಪ್ರದಾಯದ ದೇಶವಲ್ಲ. ಅನೇಕ ಜಾತಿ, ಧರ್ಮ ಇವೆಲ್ಲವನ್ನೂ ಒಟ್ಟಿಗೇ ತೆಗೆದುಕೊಂಡು ಹೋಗಬೇಕು. ಅಂಬೇಡ್ಕರ್ ಸಂವಿಧಾನದಲ್ಲಿ ಧರ್ಮನಿರಪೇಕ್ಷತೆ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಾಗಿ ಯಾರೇ ಅಧಿಕಾರಕ್ಕೆ ಬಂದರೂ ಸಂವಿಧಾನಕ್ಕೆ (Constitution) ವಿರುದ್ದ ಆಡಳಿತ ಮಾಡಬಾರದು ಎಂದು ಮನವರಿಕೆ ಮಾಡಿದ್ದಾರೆ.