Published On: Mon, Oct 10th, 2022

ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ-ಸಮಾರೋಪ ಸಮಾರಂಭ

ಬಂಟ್ವಾಳ: ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಯ ಬದುಕಿಗೆ ನಾಯಕತ್ವ ಗುಣ ಬೆಳೆಸುವ ಒಂದು ವೇದಿಕೆ ಎಂದು ಶ್ರೀ ವೆಂಕಟರಮಣ ಸ್ವಾಮೀ ಕಾಲೇಜು ಪ್ರಾಂಶುಪಾಲ ಡಾ. ಸುಯೋಗವರ್ಧನ್ ಡಿ. ಎಂ ಹೇಳಿದರು.

ಅವರು ಸರಕಾರಿ ಪ್ರೌಢ ಶಾಲೆ ಕೊಯಿಲ ಇಲ್ಲಿ ನಡೆದ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ೨೦೨೨-೨೩ರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎನ್.ಎಸ್.ಎಸ್ ವಿದ್ಯಾರ್ಥಿಯ ಸುಪ್ತ ಮನಸ್ಸಿನಲ್ಲಿರುವ ನಾಯಕತ್ವ ಗುಣಕ್ಕೆ ನಿರ್ದಿಷ್ಟ ರೂಪ ಕೊಟ್ಟು ಹೃದಯದಲ್ಲಿ ಚಿರಕಾಲ ಉಳಿಯುವಂತೆ ಮಾಡುತ್ತದೆ. ಶಿಬಿರ ಬದುಕಿನಲ್ಲಿ ಶಿಸ್ತು ಬೆಳೆಸಲು ಪ್ರೇರೇಪಿಸುತ್ತದೆ. ಎನ್.ಎಸ್.ಎಸ್ ಶಿಬಿರದಲ್ಲಿ ಪಡೆದ ಅವಕಾಶಗಳನ್ನು ಜೀವನುದ್ದಕ್ಕೂ ಆಳವಡಿಸಿಕೊಂಡು ಸ್ವಾವಲಂಬನೆ ಬದುಕಿಗೆ ಹೆಚ್ಚಿನ ಒತ್ತು ಕೊಟ್ಟು ನಾಯಕತ್ವ ಗುಣ ಬೆಳವಣಿಗೆ ಜತೆ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.

ರಾಯಿ ಗ್ರಾ.ಪಂ. ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ-ಸಮಾರೋಪ ಸಮಾರಂಭ ಸೇವಾ ಯೋಜನೆ ವಿದ್ಯಾರ್ಥಿಯ ಬದುಕನ್ನು ಅರ್ಥ ಮಾಡಿಕೊಳ್ಳುವುದರ ಜತೆ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುವುದರಿಂದ ದೈಹಿಕ, ಮಾನಸಿ, ವ್ಯಕ್ತಿತ್ವವನ್ನು ವಿಕಾಸಗೊಳಿಸುವ ಕೆಲಸ ಮಾಡುತ್ತದೆ ಎಂದರು.

ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮತ್ತು ಶಿಬಿರದ ನಿರ್ದೇಶಕಿ ಭಾರತಿ ಪಿ, ರಾಯಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹರೀಶ್ ಆಚಾರ್ಯ, ಸರಕಾರಿ ಪ್ರೌಢಶಾಲೆ ಕೊಯಿಲ ಮುಖ್ಯೋಪಾಧ್ಯಾಯಿನಿ ಸೌಮ್ಯ ಎಚ್., ಎನ್.ಎಸ್.ಎಸ್. ಘಟಕ ನಾಯಕರಾದ ಸಂಕೇತ್, ವೈಢೂರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಮತ್ತು ಶಿಬಿರದ ನಿರ್ದೇಶಕ ಪ್ರದೀಪ್ ಪೂಜಾರಿ, ಉಪನ್ಯಾಸಕರಾದ ಚಂದ್ರಿಕಾ ಆರ್ ರಾವ್, ವಿಜೇತ, ಲಕ್ಷ್ಮೀನಾರಾಯಣ ಕೆ., ಗಣೇಶ್, ಬೋಧಕೇತರ ವರ್ಗದವರಾದ ಗಣೇಶ್ ಆರ್, ತಿಮ್ಮಪ್ಪ ಕೆ, ಧರ್ನಪ್ಪ, ರಜನಿ, ಲೀಲಾ ಮತ್ತಿತರರು ಉಪಸ್ಥಿತರಿದ್ದರು.

ಸಹಶಿಬಿರಾಧಿಕಾರಿಗಳಾದ ಗೀತಾ ಯು, ನಮಿತಾ ಬಿ.ಎಲ್., ಸುದರ್ಶನ್ ಬಿ., ರಮ್ಯಶ್ರೀ, ಮತ್ತು ರೂಪಾ ಸಹಕರಿಸಿದರು. ಶಿಬಿರಾರ್ಥಿ ಕೀರ್ತನಾ ಶಿಬಿರದ ವರದಿ ವಾಚಿಸಿದರು. ಶಿಬಿರಾರ್ಥಿ ವೈಢೂರ್ಯ ಮತ್ತು ಸಂಗಮೇಶ ಅನಿಸಿಕೆ ಅಭಿವ್ಯಕ್ತಪಡಿಸಿದರು.

ಶಿಬಿರಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ-ಸಮಾರೋಪ ಸಮಾರಂಭ ಸೇವಾ ಯೋಜನೆಯ ಆಶಯ ಗೀತೆ ಹಾಡಿದರು. ಭೌತಶಾಸ್ತ್ರ ಉಪನ್ಯಾಸಕಿ ಚೇತನಾ ಎ. ಸ್ವಾಗತಿಸಿ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಶಿಬಿರಾಧಿಕಾರಿ ಶಶಿಧರ್ ಎಸ್. ವಂದಿಸಿದರು. ಸಹಶಿಬಿರಾಧಿಕಾರಿ ಭವಿತ ಕೆ. ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter