ನಾನು ನಿಷ್ಠಾವಂತ ಭಕ್ತ, ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ಕೇಜ್ರಿವಾಲ್
ಗಾಂಧಿನಗರ: ಹಿಂದೂ ಪೌರಾಣಿಕಗಳನ್ನು ಸರಿಯಾಗಿ ತಿಳಿದುಕೊಂಡರೆ ಸರಿಯಾಗಿ ತಿಳಿಯುತ್ತದೆ. ಬಿಜೆಪಿಯವರು (BJP) ದೇವರನ್ನು ಅವಮಾನಿಸುತ್ತಿದ್ದಾರೆ. ನಾನು ಮಾತ್ರ ನಿಷ್ಠಾವಂತ ಭಕ್ತ “ಜೈ ಶ್ರೀ ರಾಮ್”, (Jai Shri Ram) “ಜೈ ಶ್ರೀಕೃಷ್ಣ” ಎಂದು ಘೋಷಣೆಗಳನ್ನು ಕೂಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ರಾಮ ಜಪ ಮಾಡಿದ್ದಾರೆ.
ಗುಜರಾತ್‍ನ ವಡೋದರಾದಲ್ಲಿ ಆಮ್ ಆದ್ಮಿ ಪಕ್ಷದ (AAP) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಮತ್ತು ನಮ್ಮ ಪಕ್ಷದ ಮುಖಂಡರ ಬಗ್ಗೆ ಬಿಜೆಪಿಯವರು ಸುಳ್ಳು ಸುದ್ದಿಗಳನ್ನು ಹರಿದಾಡುತ್ತಿದ್ದಾರೆ. ನಾನು ಹೆದರುವುದಿಲ್ಲ. ನನ್ನನ್ನು ದ್ವೇಷ ಭಾವನೆಯಿಂದ ನೋಡುತ್ತಿದ್ದಾರೆ. ದ್ವೇಷದಲ್ಲಿ ಅವರು ಕುರುಡರಾಗಿದ್ದಾರೆ. ಬಿಜೆಪಿಗರು ದೇವರನ್ನು ಸಹ ಅವಮಾನಿಸುತ್ತಿದ್ದಾರೆ. ನಾನು ಮಾತ್ರ ನಿಷ್ಠಾವಂತ ಭಕ್ತ ಜೈ ಶ್ರೀ ರಾಮ್, ಜೈ ಶ್ರೀ ಕೃಷ್ಣ ಎಂದು ಕೂಗಿದ್ದಾರೆ.
ಬಿಜೆಪಿ ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸುತ್ತಿದೆ. ಆದರೆ ಅವರು ಹಿಂದೂ ವಿರೋಧಿಗಳಾಗುತ್ತಿದ್ದಾರೆ. ಮುಂದಿನ ವರ್ಷ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಸಿದ್ಧವಾಗಲಿದೆ. ಎಲ್ಲರೂ ದೇವಸ್ಥಾನಕ್ಕೆ ಭೇಟಿ ನೀಡಲು ಬಯಸುತ್ತೀರಿ. ರಾಮ ಮಂದಿರ ಪ್ರವಾಸಿಗರಿಗೆ ಮುಕ್ತವಾದ ಬಳಿಕ ಪ್ರವಾಸ, ವಾಸ್ತವ್ಯ, ಊಟ ಮತ್ತು ವಸತಿ ತುಂಬಾ ದುಬಾರಿಯಾಗಲಿದೆ. ನೀವು ನಿಮ್ಮ ಇಡೀ ಕುಟುಂಬವನ್ನು ಕರೆದುಕೊಂಡು ಹೋದರೆ ಖರ್ಚು ವೆಚ್ಚ ಹೆಚ್ಚಾಗಲಿದೆ. ಗುಜರಾತ್‍ನಲ್ಲಿ ನಾವು ಸರ್ಕಾರ ರಚಿಸಿದರೆ, ನಾವು ನಿಮ್ಮನ್ನು ಉಚಿತವಾಗಿ ಅಯೋಧ್ಯೆ ದರ್ಶನಕ್ಕೆ ಕರೆದೊಯ್ಯುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ.