ಕೈರಂಗಳ : ಬ್ರದರ್ಸ್ ಕೈರಂಗಳ ಆಶ್ರಯದ ಮುಕ್ತ ಹೊನಲು ಬೆಳಕಿನ ರೊಟೇಶನ್ ಮಾದರಿಯ ವಾಲಿಬಾಲ್ ಪಂದ್ಯಾಟದಲ್ಲಿ ತೌಡುಗೋಳಿಯ ನರಿಂಗಾನ ಯುವಕ ಮಂಡಲಕ್ಕೆ ಪ್ರಥಮ ಪ್ರಶಸ್ತಿ,
ಮೂರು ತಿಂಗಳ ಅಂತ್ಯದಲ್ಲಿ ಆರು ಪ್ರಥಮ ಪ್ರಶಸ್ತಿಯ ಗರಿಗೆ ಪಾತ್ರವಾಯಿತು ಯುವಕ ಮಂಡಲ ನರಿಂಗಾನ
ಕೊಣಾಜೆ: ಬ್ರದರ್ಸ್ ಕೈರಂಗಳ ಆಶ್ರಯದಲ್ಲಿ ಉಳ್ಳಾಲ ತಾಲೂಕು ಅಸೋಸಿಯೇಷನ್ ಸಹಕಾರದೊಂದಿಗೆ ದುಗ್ಗಜ್ಜರಕಟ್ಟೆಯ ಕೈರಂಗಳ ಶಾಲಾ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಮುಕ್ತ ಹೊನಲು ಬೆಳಕಿನ ರೊಟೇಶನ್ ಮಾದರಿಯ ವಾಲಿಬಾಲ್ ಪಂದ್ಯಾಟ “ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಶಸ್ತಿ” ಗಾಗಿ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ ತೌಡುಗೋಳಿಯ ನರಿಂಗಾನ ಮಂಡಲ ತಂಡ ಪ್ರಥಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದು ಶ್ರೀಕೃಷ್ಣ ಗೇಮ್ಸ್ ಕ್ಲಬ್ ಕೈರಂಗಳ ತಂಡ ರನ್ನರ್ಸ್ ಗೆ ತೃಪ್ತಿ ಪಡೆಯಿತು.
ಫೈನಲ್ ನಲ್ಲಿ ಯುವಕ ಮಂಡಲ ನರಿಂಗಾನ ತಂಡ ಹಾಗೂ ಶ್ರೀಕೃಷ್ಣ ಗೇಮ್ಸ್ ಕ್ಲಬ್ ನಡುವಿನ ಬಿಗು ಹೋರಾಟದಲ್ಲಿ ನರಿಂಗಾನ ಯುವಕ ಮಂಡಲ 2-1ರ ಮೂಲಕ ಗೆಲುವು ದಾಖಲಿಸಿತು.
ಫೈನಲ್ ಪಂದ್ಯದಲ್ಲಿ ಮೊದಲ 25ರ ಸೆಟ್ ನಲ್ಲಿ ಕೈರಂಗಳ ತಂಡ ಆರಂಭದಿಂದಲೇ ಹಿಡಿತ ಸಾಧಿಸಿ ಗೆಲುವು ತನ್ನದಾಗಿಸಿಕೊಂಡಿತು. ಎರಡನೇಯ ಸೆಟ್ ನಲ್ಲಿ ತದ್ವಿರುದ್ಧವಾಗಿ ನರಿಂಗಾನ ಯುವಕ ಮಂಡಲ ತಂಡದ ಆಟಗಾರರು ಅದ್ಭುತ ಪ್ರದರ್ಶನ ನೀಡಿ ಗೆಲವು ಪಡೆಯುವ ಮೂಲಕ ಸಮಬಲ ಸಾಧಿಸಿದರು. ಮೂರನೆಯ ಫೈನಲ್ ಸೆಟ್ 15ಅಂಕಕ್ಕೆ ಸೀಮಿತವಾಗಿದ್ದು ಜಿದ್ದಾಜಿದ್ದಿನ ಹೋರಾಟ ನಡೆದು ಅಂತಿಮವಾಗಿ ನರಿಂಗಾನ ಯುವಕ ಮಂಡಲ ಗೆಲುವಿನ ನಗೆ ಬೀರಿತು.
ಇದಕ್ಕೂ ಮುನ್ನ ಸೆಮಿಫೈನಲ್ ನಲ್ಲಿ ಯುವಕ ಮಂಡಲ ನರಿಂಗಾನ ತಂಡ ಚಾಲೆಂಜರ್ಸ್ ಕೈರಂಗಳ ತಂಡವನ್ನು ಹಾಗೂ ಶ್ರೀಕೃಷ್ಣ ಗೇಮ್ಸ್ ಕ್ಲಬ್ ಬ್ರದರ್ಸ್ ತಂಡ ಕೈರಂಗಳ ತಂಡವನ್ನು ಸೋಲಿಸಿ ಫೈನಲ್ ಗೆ ಪ್ರವೇಶಿಸಿತ್ತು.
ಶ್ರೀ ಕೃಚ್ಣ ಗೇಮ್ಸ್ ಕ್ಲಬ್ ಕೈರಂಗಳ ತಂಡ ದ್ವಿತೀಯ ಪ್ರಶಸ್ತಿ ಹಾಗೂ ನಗದು ಆರು ಸಾವಿರ ರೂ.ತನ್ನದಾಗಿಸಿಕೊಡಿತು. ಬ್ರದರ್ಸ್ ಕೈರಂಗಳ
ತೃತೀಯ ಪ್ರಶಸ್ತಿ ಹಾಗೂ ನಗದು ಮೂರು ಸಾವಿರ ರೂ. ಹಾಗೂ ಚಾಲೆಂಜರ್ಸ್ ಕೈರಂಗಳ ತಂಡ ಚತುರ್ಥ ಎರಡು ಸಾವಿರ ರೂ.. ನಗದು ಹಾಗೂ ಪ್ರಶಸ್ತಿ ಪಡೆಯಿತು.
ನರಿಂಗಾನ ಯುವಕ ಯುವಕ ಮಂಡಲದ ಅಯಾನ್ ಬೆಸ್ಟ್ ಆಲ್ ರೌಂಡರ್ ಹಾಗೂ ಚಿನ್ನಾ ಬೆಸ್ಟ್ ಪಾಸರ್ ಆಗಿಯೂ ಶ್ರೀಕೃಷ್ಣ ಗೇಮ್ಸ್ ಕೈರಂಗಳ ತಂಡದ ಪೈಝಲ್ ಅತ್ಯುತ್ತಮ ಹೊಡೆತಗಾರ ವೈಯಕ್ತಿಕ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಸಮಾರೋಪದಲ್ಲಿ ಉಳ್ಳಾಲ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ತ್ಯಾಗಂ ಹರೇಕಳ, ಪ್ರಧಾನ ಕಾರ್ಯದರ್ಶಿ ಇಕ್ಬಾಲ್, ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾಯಿ, ನರಿಂಗಾನ ಯುವಕ ಮಂಡಲದ ಅಧ್ಯಕ್ಷ ಜೀತೇಶ್ ಶೆಟ್ಟಿ ಪೂಂಜರ ಮನೆ, ಕ್ರೀಡಾ ಕಾರ್ಯದರ್ಶಿ ವಿಜಯ್ ಪೂಜಾರಿ ಆರ್. ಸರ್ಕುಡೇಲು, ಸಾಂಸ್ಕೃತಿಕ ಕಾರ್ಯದರ್ಶಿ ಪ್ರಜ್ವಲ್ , ನರಿಂಗಾನ ಯುವಕ ಮಂಡಲದ ಮಾಜಿ ಅಧ್ಯಕ್ಷರುಗಳಾದ ಚಂದ್ರಹಾಸ್ ಎಲ್. ಸರ್ಕುಡೇಲು,ವಿಜಯ್ ಎಲ್. ಸರ್ಕುಡೇಲು, ಅವಿನಾಶ್ ಸರ್ಕುಡೇಲು, ನಿಖಿಲ್ ಆಳ್ವ ಗರೋಡಿ, ಇಬ್ರಾಹಿಂ ಶಾಂತಿಪಳಿಕೆ, ರಾಕೇಶ್ ಕೊರಕಟ್ಟ, ಸತೀಶ್ ಮಲಿ, ಪರಶು ಆಳ್ವಆಳ್ವರಬೆಟ್ಟುರಬೆಟ್ಟು, ನಿತಿನ್ ನಿಡ್ಮಾಡ್, ಮುರಲೀಧರ ಶೆಟ್ಟಿ ತಿಮರಕೋಡಿ, ಶ್ರೀಕುಮಾರ್ ಸರ್ಕುಡೇಲು, ರಾಜೀವ ಎಸ್. ಶಾಂತಿಪಳಿಕೆ, ಪ್ರದೀಪ್ ಕೋಟ್ಯಾನ್ ಶಾಂತಿಪಳಿಕೆ, ರವೀಂದ್ರ ಶಾಂತಿಪಳಿಕೆ, ಶ್ರವಣ್ ಸರ್ಕುಡೇಲು ಹಾಗೂ ಕೌಶಿಕ್ ತೌಡುಗೋಳಿ ಪಾಲ್ಗೊಂಡಿದ್ದರು. ಸತ್ತಾರ್ ಕೈರಂಗಳ ಹಾಗೂ ಇಕ್ಬಾಲ್ ಕೈರಂಗಳ ಕಾರ್ಯಕ್ರಮ ನಿರೂಪಿಸಿದರು.