ಶ್ರೀ ಶಾರದಾ ಮಾತೆಗೆ ಶ್ರೀಪಾದರಿಂದ ರಜತ ಪುಸ್ತಕ ಸಮರ್ಪಣೆ
ಬಂಟ್ವಾಳ: ಎಸ್.ವಿ.ಎಸ್ ದೇವಳ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೯೦ನೇ ವರ್ಷ ಪೂಜಿಸಲಾದ ಶ್ರೀ ಶಾರದಾ ಮಾತೆಗೆ ಕಾಶಿ ಮಠಾಧೀಶ ಸಂಯಮೀಂದ್ರ ತೀರ್ಥ ಶ್ರೀಪಾದರು ಅ.04ರಂದು ಮಂಗಳವಾರ ರಜತ ವೀಣೆ ಸಹಿತ ರಜತ ಪ್ರಭಾವಳಿ ಮತ್ತು ರಜತ ಪುಸ್ತಕ ಸಮರ್ಪಿಸಿದರು. ದೇವಳದ ಆಡಳಿತ ಮೊಕ್ತೇಸರ ಪುರುಷೋತ್ತಮ ಶೆಣೈ, ಪ್ರಮುಖರಾದ ಪ್ರವೀಣ್ ಕಿಣಿ, ಎ.ಗೋವಿಂದ ಪ್ರಭು, ಸೂರ್ಯನಾರಾಯಣ ಬಾಳಿಗಾ ಮತ್ತಿತರರು ಇದ್ದರು.