ಅಣ್ಣಳಿಕೆ ನೂತನ ರಿಕ್ಷಾ ತಂಗುದಾಣ ಉದ್ಘಾಟನೆ
ಬಂಟ್ವಾಳ: ತಾಲ್ಲೂಕಿನ ಅಣ್ಣಳಿಕೆಯಲ್ಲಿ ನಿರ್ಮಾಣಗೊಂಡ ನೂತನ ರಿಕ್ಷಾ ತಂಗುದಾಣವನ್ನು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಅ.05ರಂದು ಬುಧವಾರ ಉದ್ಘಾಟಿಸಿದರು. ಅರಳ ಗ್ರಾ.ಪಂ.ಅಧ್ಯಕ್ಷ ಲಕ್ಷ್ಮೀಧರ ಶೆಟ್ಟಿ, ಉಪಾಧ್ಯಕ್ಷ ರಶ್ಮಿ ಶೆಟ್ಟಿ ರಾಯಿ, ಪ್ರಮುಖರಾದ ದೇವಪ್ಪ ಪೂಜಾರಿ, ವಸಂತ ಕುಮಾರ್ ಅಣ್ಣಳಿಕೆ, ಡೊಂಬಯ ಅರಳ, ರಮಾನಾಥ ರಾಯಿ, ಎಂ.ದುರ್ಗಾದಾಸ್ ಶೆಟ್ಟಿ, ರಾಮಚಂದ್ರ ಅಣ್ಣಳಿಕೆ ಮತ್ತಿತರರು ಇದ್ದರು.