ಅಮ್ಟಾಡಿ: ಹಾಲು ಉತ್ಪಾದಕರ ಸೊಸೈಟಿ ವಾರ್ಷಿಕ ಸಭೆ
ಬಂಟ್ವಾಳ: ಇಲ್ಲಿನ ಅಮ್ಟಾಡಿ ಹಾಲು ಉತ್ಪಾದಕರ ಸಹಾಕರಿ ಸಂಘದ ವಾರ್ಷಿಕ ಸಭೆ ಸಂಘದ ಅಧ್ಯಕ್ಷ ಉದಯ್ ಕುಮಾರ್ ಅಜೆಕಲ ಇವರ ಅಧ್ಯಕ್ಷತೆಯಲ್ಲಿ ಸೆ.15ರಂದು ಬುಧವಾರ ನಡೆಯಿತು.
ಇದೇ ವೇಳೆ ಅತೀ ಹೆಚ್ಚು ಹಾಲು ಪೂರೈಕೆ ಮಾಡಿದ ರತ್ನಾ ಆರ್. ಭಟ್, ಲಿಲ್ಲಿ ಪಿಂಟೋ, ಆಲ್ಪೋನ್ಸ್, ಕೆಎಂಎಫ್ ಉಪ ವ್ಯವಸ್ಥಾಪಕ ಶ್ರೀನಿವಾಸ್ ಇವರನ್ನು ಗೌರವಿಸಲಾಯಿತು. ಕೆಎಂಎಫ್ ವಿಸ್ತರಣಾಧಿಕಾರಿ ಸಂದೀಪ್, ನಿರ್ದೇಶಕರಾದ ಕರುಣಾಕರ ಶೆಟ್ಟಿ, ಯಶವಂತ ಶೆಟ್ಟಿ, ಸಿರಿಲ್ ಅಲ್ಮೆಡಾ, ಬೇಬಿ ಶೆಟ್ಟಿ, ಜೋಸೆಫ್ ಡಿಸೋಜಾ, ಕೇಶವ ಜೋಗಿ, ಫ್ಲೋರಿನ್, ಸತೀಶ್ ರೈ, ನಿರ್ದೇಶಕ ಅನಿಲ್ ಪಿಂಟೋ, ಪ್ರಭಾಕರ್ ಶೆಟ್ಟಿ ಇದ್ದರು.