ಸಿದ್ಧಕಟ್ಟೆ: ೧೬೮ನೇ ಬ್ರಹ್ಮಶ್ರೀ ಗುರುನಾರಾಯಣ ಜಯಂತಿ, ಪ್ರಥಮ ಚಿಕಿತ್ಸೆ ಕಿಟ್ ವಿತರಿಸಿದ ರೋಟರಿ ಕ್ಲಬ್
ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸಮಾಜ ಸೇವಾ ಸಂಘಕ್ಕೆ ಫಲ್ಗುಣಿ ರೋಟರಿ ಕ್ಲಬ್ ವತಿಯಿಂದ ಪ್ರಥಮ ಚಿಕತ್ಸೆ ಕಿಟ್ ಶನಿವಾರ ಹಸ್ತಾಂತರಿಸಿದರು.

ಸಮಾಜದಲ್ಲಿ ಹೆಣ್ಮಕ್ಕಳಿಗೆ ಗೌರವ ನೀಡುವುದರ ಜೊತೆಗೆ ಮನೆಯಲ್ಲಿ ಅವಿಭಕ್ತ ಕುಟುಂಬ ಮಾದರಿಯಲ್ಲಿ ಸುಸಂಸ್ಕೃತ ಜೀವನ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಎಂದು ಮೂಡುಬಿದ್ರೆ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕಿ ಡಾ.ಮಧುಮಾಲ ಕೆ. ಹೇಳಿದ್ದಾರೆ.
ಇಲ್ಲಿನ ಸಿದ್ಧಕಟ್ಟೆ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸಮಾಜ ಸೇವಾ ಸಂಘದ ವತಿಯಿಂದ ಸಿದ್ಧಕಟ್ಟೆ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಶನಿವಾರ ನಡೆದ ೧೬೮ನೇ ಜನ್ಮದಿನಾಚರಣೆ ಮತ್ತು ಗುರುಪೂಜೆಯ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಘದ ಅಧ್ಯಕ್ಷ ದಿನೇಶ ಸುಂದರ ಶಾಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೂಡುಬಿದ್ರೆ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಡಾ.ಯೋಗೀಶ್ ಕೈರೋಡಿ ದಿಕ್ಸೂಚಿ ಭಾಷಣ ಮಾಡಿ, ‘ಕೇರಳದಲ್ಲಿ ಜನಿಸಿದ ಬ್ರಹ್ಮಶ್ರೀ ಗುರೂಜಿ ಅವರು ಸಮಾಜಕ್ಕೆ ನೀಡಿದ ಅಮರ ತತ್ವ ಸಂದೇಶ ಸಾರ್ವಕಾಲಿತ ಸತ್ಯವಾಗಿ ಉಳಿದಿದೆ’ ಎಂದರು.
ಇದೇ ವೇಳೆ ಸ್ಥಳದಾನಿ ದಿವಂಗತ ನಾರಾಯಣ ಅಂಚನ್ ದಂಪತಿ ಭಾವಚಿತ್ರ ಅನಾವರಣ ಮತ್ತು ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಫಲ್ಗುಣಿ ರೋಟರಿ ಕ್ಲಬ್ ಅಧ್ಯಕ್ಷ ಗಣೇಶ ಶೆಟ್ಟಿ ಆರಂಬೋಡಿ ‘ಪ್ರಥಮ ಚಿಕಿತ್ಸೆ ಕಿಟ್’ ಹಸ್ತಾಂತರಿಸಿದರು. ಸದಸ್ಯರಾದ ಸಚ್ಚಿದಾನಂದ ಭಟ್, ಪ್ರಭಾಕರ ಹುಲಿಮೇರು, ಚಂದ್ರ ಕೋರ್ಯಾರು, ಶಿವರಾಜ್ ಶೆಟ್ಟಿ ಜೊತೆಗಿದ್ದರು.
ಸಂಘದ ಗೌರವಾಧ್ಯಕ್ಷ ಎಂ.ಗೋಪಾಲ ಬಂಗೇರ, ಪ್ರಧಾನ ಕಾರ್ಯದರ್ಶಿ ಉಮೇಶ ಹಿಂಗಾಣಿ, ಉಪಾಧ್ಯಕ್ಷ ದಾಮೋದರ ಪಿ.ದೋಟ, ಯುವ ಸಮಿತಿ ಅಧ್ಯಕ್ಷ ಆನಂದ ಪೂಜಾರಿ ಕೆಂತಲೆ, ಉಪಾಧ್ಯಕ್ಷ ದೇವರಾಜ್ ಸಾಲ್ಯಾನ್, ಮಹಿಳಾ ಸಮಿತಿ ಅಧ್ಯಕ್ಷೆ ಅರುಣಾ ವಿಶ್ವನಾಥ ದೋಟ, ಗೌರವಾಧ್ಯಕ್ಷೆ ಗಿರಿಜಾ ಅಂಚನ್ ಕೊಡಂಗೆ ಮತ್ತಿತರರು ಇದ್ದರು.
ಸಂಘದ ಅಧ್ಯಕ್ಷ ದಿನೇಶ ಸುಂದರ ಶಾಂತಿ ಸ್ವಾಗತಿಸಿ, ದೇಜಪ್ಪ ವಿ.ಪೂಜಾರಿ ವಂದಿಸಿದರು. ಜೀವಂಧರ್ ಸಾಲ್ಯಾನ್ ದೋಟ ಕಾರ್ಯಕ್ರಮ ನಿರೂಪಿಸಿದರು.