ಪೊಳಲಿ: ಸರ್ಕಾರಿ ಪ್ರೌಢಶಾಲೆ ಸಾಹಿತ್ಯ ಕಮ್ಮಟ ಮತ್ತು ಪ್ರಶಸ್ತಿ ಪ್ರದಾನ
ಕೈಕಂಬ: ಬಂಟ್ವಾಳ ತಾಲ್ಲೂಕಿನ ಪೊಳಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆ.03ರಂದು ಬುಧವಾರ ನಡೆದ ಸಾಹಿತ್ಯ ಕಮ್ಮಟ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಚಾಲನೆ ನೀಡಿದರು.

ಸಾಹಿತ್ಯ ಎಂಬುದು ಓದುಗರಿಗೆ ಆತ್ಮವಿಮರ್ಶೆ ಮಾಡಿಕೊಳ್ಳುವಂತೆ ಬದುಕಿಗೆ ಹತ್ತಿರವಾಗಿ ಉತ್ತಮ ಸಮಾಜ ಕಟ್ಟಲು ಪ್ರೇರಣೆಯಾಗಬೇಕು ಎಂದು ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಹೇಳಿದರು.
ಇಲ್ಲಿನ ಪೊಳಲಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆ.03ರಂದು ಬುಧವಾರ ನಡೆದ ‘ಸಾಹಿತ್ಯ ಕಮ್ಮಟ ಮತ್ತು ಪ್ರಶಸ್ತಿ ಪ್ರದಾನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇದೇ ವೇಳೆ ಕೃಷ್ಣಮೂರ್ತಿ ಕುಲಕರ್ಣಿ ಇವರಿಗೆ ‘ಚುಟುಕು ಕವಿ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಯಾನಂದ ಪೆರಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಸರಗೋಡು ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ಡಾ. ವಾಣಿಶ್ರೀ, ಮುಖ್ಯಶಿಕ್ಷಕ ರಾಧಾಕೃಷ್ಣ ಭಟ್ ಕೆ., ಕವಿ ಡಾ. ಕೊಳಪೆ ಗೋವಿಂದ ಭಟ್, ಶಾಂತ ಪುತ್ತೂರು, ಗುರುರಾಜ್ ಎಂ. ಆರ್. ಕಾಸರಗೋಡು, ಶಿಕ್ಷಕಿ ಶಾಂತ ಕಬಕ, ಶಿಕ್ಷಕಿ ವಸಂತಿ ಇದ್ದರು.