ಮೃತಪಟ್ಟ ಬಜರಂಗದಳ ಸದಸ್ಯ ದಿವಂಗತ ವಿಜಯ ಪುಣ್ಕೆದಡಿ ಅವರ ಮನೆ ನಿರ್ಮಾಣಕ್ಕೆ ಶಿಲಾನ್ಯಾಸ
ಬಂಟ್ವಾಳ: ತಾಲ್ಲೂಕಿನ ಮಣಿನಾಲ್ಕೂರು ಗ್ರಾಮದ ಪುಣ್ಕೆದಡಿ ಎಂಬಲ್ಲಿ ಈಚೆಗೆ ಮೃತಪಟ್ಟ ಬಜರಂಗದಳ ಸದಸ್ಯ ದಿವಂಗತ ವಿಜಯ ಪುಣ್ಕೆದಡಿ ಅವರ ಕುಟುಂಬಕ್ಕೆ ದಾನಿಗಳ ನೆರವಿನಿಂದ ನೂತನ ಮನೆ ನಿರ್ಮಾಣಕ್ಕೆ ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಜೂ.18ರಂದು ಶನಿವಾರ ಶಿಲಾನ್ಯಾಸ ನೆರವೇರಿಸಿದರು.
ಪುರೋಹಿತ ಸಾಯಿ ಶಾಂತಿ ಕೋಕಲ, ಗುರುವ- ವಿಮಲ ದಂಪತಿ, ವಿಹಿಂಪ ಅಧ್ಯಕ್ಷ ಪ್ರಸಾದ್ ಕುಮಾರ್ ರೈ, ಪ್ರಕೋಷ್ಠ ಅಧ್ಯಕ್ಷ ಅಶೋಕ ಸರಪಾಡಿ ಮತ್ತಿತರರು ಇದ್ದರು.