ಮೂಡುಬಿದಿರೆ: ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ, ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಡೇಲುಸುತ್ತಿನಲ್ಲಿ ಮಂಗಳವಾರ ರಾತ್ರಿ ಪಿಕ್ ಅಪ್ ವಾಹನ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.WhatsApp Image 2021-12-01 at 9.58.20 AM

WhatsApp Image 2021-12-01 at 9.58.20 AM (1)

ಎಡಪದವು ಕನ್ನೊಳಿ ನಿವಾಸಿ ಯಾದವ (38) ಮೃತ ಚಾಲಕ. ಮಂಗಳವಾರ ರಾತ್ರಿ ಅವರು ಮೂಡುಬಿದಿರೆ ಕಡೆಯಿಂದ ಎಡಪದವಿಗೆ ಪಿಕ್ ವಾಹನ ಚಲಾಯಿಸುತ್ತಿದ್ದು , ಹಂಡೇಲು ಸುತ್ತು ತಿರುವಿನಲ್ಲಿ ಪಿಕ್ ಅಪ್ ಪಲ್ಟಿಯಾಗಿ, ತೆಂಗಿನ ಮರಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಯಾದವ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.WhatsApp Image 2021-12-01 at 9.46.28 AM

By suddi9

Leave a Reply

Your email address will not be published. Required fields are marked *