ಬಂಟ್ವಾಳ: ಕೆಸರುಗದ್ದೆ ಕ್ರೀಡೆ ಮನರಂಜನೆ ಜತೆ ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ಇದನ್ನು ಮುಂದಿನ ಪೀಳಿಗೆಗೆ ತಿಳಿಸಲು ಇಂತಹ ಕ್ರೀಡಾಕೂಟ ಆಯೋಜನೆ ಶ್ಲಾಘನೀಯ ಎಂದು ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಹೇಳಿದರು.0310pkt1ಅವರು ರವಿವಾರ ಬಂಟ್ವಾಳ ತಾ. ಇರ್ವತ್ತೂರುಪದವು ಶ್ರೀ ಶಾರದೋತ್ಸವ ಸೇವಾ ಸಮಿತಿ, ಹಿಂದು ಜಾಗರಣ ವೇದಿಕೆ ಛತ್ರಪತಿ ಶಿವಾಜಿ ಘಟಕ ಮೂಡುಪಡುಕೋಡಿ, ಶ್ರೀ ಲಕ್ಷ್ಮೀ ಮಹಿಳಾ ಮಂಡಳಿ ಪಾಂಗಲ್ಪಾಡಿ ಇದರ ಜಂಟಿ ಆಶ್ರಯದಲ್ಲಿ ಹಡಿಲು ಬಿದ್ದ ಭೂಮಿಯಲ್ಲಿ ಕೃಷಿ ಕ್ರಾಂತಿ ಕಾರ್ಯಕ್ರಮ ಪ್ರಯುಕ್ತ ಕಲಾಬಾಗಿಲುವಿನ ಬೆದ್ರಮಾರ್ ಗದ್ದೆಯಲ್ಲಿ ನಡೆದ  ಕೆಸರ್‌ಡ್ ಒಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.Screenshot_20211003-150556_Video Playerಹಡಿಲು ಬಿದ್ದ ಗದ್ದೆಗಳಲ್ಲಿ ಕೃಷಿ ಕಾರ್ಯ ನಡೆಸಲು ಯುವಕರು ಮುಂದಾಗಿರುವುದು ಅಭಿನಂದನೀಯ ಇಂತಹ ಕಾರ್ಯಕ್ರಮಕ್ಕೆ ದಾನಿಗಳ ಸಹಕಾರ ಅಗತ್ಯ ಎಂದರು. ಪ್ರಗತಿಪರ ಕೃಷಿಕ ಸಂಜೀವ ಶೆಟ್ಟಿ ಗುಂಡ್ಯಾರು ಅಧ್ಯಕ್ಷತೆ ವಹಿಸಿದ್ದರು. ಸ್ಥಳದಾನಿ ಅಟೋಮೇಶನ್ ಕ್ಲೌಡ್ ಸೊಲ್ಯೂಷನ್ ಎಂ.ಡಿ.ಜಗದೀಶ್ ರಾಮ, ಪತ್ರಕರ್ತ ರತ್ನದೇವ್ ಪುಂಜಾಲಕಟ್ಟೆ, ಉದ್ಯಮಿ ಹರೀಂದ್ರ ಪೈ, ಇರ್ವತ್ತೂರು ಗ್ರಾ.ಪಂ.ಅಧ್ಯಕ್ಷ ಎಂ.ಪಿ.ಶೇಖರ್ ಶುಭ ಹಾರೈಸಿದರು.

ಸಮಿತಿ ಅಧ್ಯಕ್ಷ ಡಾ.ರಾಮಕೃಷ್ಣ ಎಸ್., ಉದ್ಯಮಿಗಳಾದ ಅಬ್ದುಲ್ ನಜೀರ್ ಸಾಹೇಬ್, ಮೋಹನ್ ಶೆಟ್ಟಿ ನರ್ವಲ್ದಡ್ಡ,ಬೋಬಿ ರಾಯಿ, ಅರವಿಂದ ಪೈ, ಶೇಖರ್ ಅಬ್ರೋಡಿ, ಪ್ರಗತಿಪರ ಕೃಷಿಕರಾದ ಬೂಬ ಸಫಲ್ಯ ಮುಂಡಬಲ್, ನಿರಂಜನ್ ಜೈನ್ ಎಡ್ತೂರುಗುತ್ತು, ರಮೇಶ್ ನಾಕ್ ಕಲ್ಲಡ್ಕ,ಇರ್ವತ್ತೂರು ಗ್ರಾ.ಪಂ.ಪಿಡಿಒ ಜೋಯೆಲ್ ಪ್ರಶಾಂತ್ ಫೆಲೆರೊ, ಗಂಗಾಧರ ಶೆಟ್ಟಿ, ಪಂಜಿಕಲ್ಲು ಗ್ರಾ.ಪಂ.ಸದಸ್ಯ ಮೋಹನ್‌ದಾಸ್, ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುನಿಲ್ ಸಿಕ್ವೆರಾ,ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ, ಮಹಿಳಾ ಮಂಡಳಿ ಅಧ್ಯಕ್ಷೆ ಶಶಿಕಲಾ ಉಡುಪ,ಹಿಂದು ಜಾಗರಣ ವೇದಿಕೆ ಛತ್ರಪತಿ ಶಿವಾಜಿ ಘಟಕ ಮೂಡುಪಡುಕೋಡಿ ಅಧ್ಯಕ್ಷ ಯಕ್ಷಿತ್ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜಗದೀಶ ರಾಮ ಅವರನ್ನು ಸಮ್ಮಾನಿಸಲಾಯಿತು.ಕಂಬಳದ ಓಟದ ಕೋಣಗಳನ್ನು ಗದ್ದೆಗಿಳಿಸಲಾಯಿತು. ಶಾರದೋತ್ಸವ ಸಮಿತಿ ಉಪಾಧ್ಯಕ್ಷ ಶಂಕರ ಶೆಟ್ಟಿ ಬೆದ್ರಮಾರ್ ಸ್ವಾಗತಿಸಿ, ಪ್ರಸ್ತಾವಿಸಿದರು. ಪ್ರ.ಕಾರ್ಯದರ್ಶಿ ದಯಾನಂದ ಎರ್ಮೆನಾಡು ವಂದಿಸಿದರು. ಗಣೇಶ್ ಶೆಟ್ಟಿ ಸೆವಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು

By Suddi9

Leave a Reply

Your email address will not be published. Required fields are marked *