Published On: Sat, Sep 18th, 2021

ಕೋವಿಡ್ ಲಸಿಕೆಯಿಂದ ತೊಂದರೆ ಉಂಟಾಗುತ್ತದೆ ಎಂಬ ವದಂತಿಗಳಿಗೆ ಕಿವಿಕೊಡಬಾರದು: ನೋಡಲ್ ಅಧಿಕಾರಿ ಧನಂಜಯ್

ಶ್ರೀನಿವಾಸಪುರ : ಕೋವಿಡ್ ಲಸಿಕೆಯನ್ನು ೧೮ ವರ್ಷ ಮೇಲ್ಪಟ್ಟ ಎಲ್ಲರೂ ಪಡೆಯಬಹುದು ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಕೋವಿಡ್ ಲಸಿಕೆಯಿಂದ ತೊಂದರೆ ಉಂಟಾಗುತ್ತದೆ ಎಂಬ ವದಂತಿಗಳಿಗೆ ಕಿವಿಕೊಡಬಾರದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹಾಗೂ ನೋಡಲ್ ಅಧಿಕಾರಿ ಧನಂಜಯ್ ತಿಳಿಸಿದರು.
sudhi 1 photoತಾಲ್ಲೂಕಿನ ರೋಣೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆಯ ಬಗ್ಗೆ ಮನೆ ಮನೆಗೆ ತೆರಳಿ ಕೋವಿಡ್ ಲಸಿಕೆಯ ಬಗ್ಗೆ ತಿಳಿಸಿ ಬೃಹತ್ ಪ್ರಮಾಣದ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಧನಂಜಯ್ ಕೋವಿಡ್ ಸೋಂಕು ಯಾವಾಗ, ಹೇಗೆ, ಎಲ್ಲಿ, ಬರುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ.

ಸೋಂಕು ಹೆಚ್ಚಾದರೆ ಕಠಿಣ ಕ್ರಮಗಳು ಅನಿರ್ಯವಾಗಿ ಕೈಗೊಳ್ಳಬೇಕಾಗುತ್ತದೆ. ಇದರಿಂದ ದುಡಿಮೆಗೆ ತೊಂದರೆ ಆಗುತ್ತದೆ ಇದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಂಡು ಲಸಿಕೆಯನ್ನು ಪಡೆದು ನಂತರವೂ ಕೋವಿಡ್ ಸೋಂಕಿಗೆ ಒಳಗಾದರೂ ಸೋಂಕಿನ ತೀವ್ರತೆ ಕಡಿಮೆ ಇರುತ್ತದೆ ಎಂದರು. ಈ ಬೃಹತ್ ಲಸಿಕೆ ಅಭಿಯಾನದಲ್ಲಿ ಸಾರ್ವಜನಿಕರು ಭಾಗವಹಿಸಿ ಲಸಿಕೆಯನ್ನು ಪಡೆದು ಕೋರೊನಾ ಮುಕ್ತವನ್ನಾಗಿ ಮಾಡಲು ಸಹಕರಿಸಿಬೇಕು ಕೋವಿಡ್ ಲಸಿಕೆ ಕೇವಲ ನಮ್ಮ ಕುಟುಂಬದವರು ಪಡೆದರೆ ಸಾಲದು ನಮ್ಮ ಸುತ್ತಮುತ್ತಲು ವಾಸಿಸುವವರು ಪಡೆಯಬೇಕು ಏಕೆಂದರೆ ನಾವು ದಿನನಿತ್ಯ ಜೀವನದಲ್ಲಿ ಅವರೊಂದಿಗೂ ಸಹ ಸಂಪರ್ಕದಲ್ಲಿ ಇರುತ್ತೇವೆ. ಎಂದ ಇವರು ಕೋವಿಡ್ ಲಸಿಕೆ ಪ್ರತಿಯೊಬ್ಬರು ಪಡೆದು ಕೋರೊನದಿಂದ ಸುರಕ್ಷಿತವಾಗಿರಿ ಕೋವಿಡ್ ಲಸಿಕೆಯ ಬಗ್ಗೆ ನಿರ್ಲಕ್ಷೆ ಬೇಡ ಎಂದರು.

ತಾಲ್ಲೂಕು ಆರೋಗ್ಯ ಅಧಿಕಾರಿ ಡಾ|| ವಿಜಯ ಅವರು ಮಾತನಾಡಿ ೧೮ ವರ್ಷ ಮೇಲ್ಪಟ್ಟವರು ಕೋವಿಡ್ ಲಸಿಕೆ ಪಡೆಯಲು ಅರ್ಹರು. ಗರ್ಭಣಿ ಹಾಗೂ ಬಾಣಂತಿಯರು  ಯರು ಯಾವುದೇ ಅಂತಕ ಪಡದೆ ಲಸಿಕೆ ಪಡೆದುಕೊಳ್ಳಬಹುದು ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ.

ಸಕ್ಕರೆ, ರಕ್ತದ ಒತ್ತಡ, ವಯಸ್ಸಾದವರು, ಲಸಿಕೆ ಪಡೆಯಬಹುದು ಮೊದಲ ಡೋಸ್ ಹಾಗೂ ಅವಧಿ ಪೂರ್ಣಗೊಳಿಸಿ ಎರಡನೇ ಡೋಸ್‌ಗೆ ಅರ್ಹರಾಗಿರುವರಿಗೆ ಲಸಿಕೆ ನೀಡಲಾಗುವುದು ಈ ತಾಲ್ಲೂಕಿನಲ್ಲಿ ಒಟ್ಟಾರೆ ಶೇಕಡ ೭೫ % ರಷ್ಟು ಲಸಿಕೆ ನೀಡಲಾಗಿದೆ. ಈ ಲಸಿಕೆಯ ಅಭಿಯಾನ ಸದುಪಯೋಗಪಡಿಸಿಕೊಂಡು ಕೋರೋನಾ ಮುಕ್ತ ತಾಲ್ಲೂಕುನ್ನಾಗಿ ಮಾಡಲು ಸಹಕರಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಪಿಡಿಓ ಸಂಪತ್ ಕುಮಾರ್, ಆಶಾ ಕಾರ್ಯಕರ್ತರಾದ ಪಾರ್ವತಮ್ಮ, ಅಸ್ವತ್ರೆಯ ದಾದಿ ನಾಗಮಣಿ, ಸಿಬ್ಬಂದಿಯಾದ ಲಕ್ಷ್ಮೀದೇವಮ್ಮ ಇನ್ನೀತರರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter