ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದಲಿ ಸಾರ್ವಜನಿಕ ಲಕ್ಷ ತುಳಸಿ ಅರ್ಚನೆ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಸರಕಾರ ಚಿಂತನೆ: ಶಾಸಕ ಉಮಾನಾಥ ಕೋಟ್ಯಾನ್
ಮುಂಬಯಿ: ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಸರಕಾರ ವಿಶೇಷ ಚಿಂತನೆ ನಡೆಸಿದ್ದು ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಮುಜರಾಯಿ ಇಲಾಖೆಯ ಸಚಿವರೊಂದಿಗೆ ಮಾತುಕತೆ ನಡೆಸುವುದಾಗಿ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮನಾಥ ಕೋಟ್ಯಾನ್ ಹೇಳಿದರು.ಶಾಸಕ ಕೋಟ್ಯಾನ್ ಮೂಲ್ಕಿ ಸಮೀಪದ ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದ ನೂತನ ಸೇವಾ ಕೌಂಟರ್ ಉದ್ಘಾಟಿಸಿ ಮಾತನಾಡಿ ಸರಕಾರದ ವಿಶೇಷ ಮುತುವರ್ಜಿಯಿಂದ ದೇವಸ್ಥಾನಗಳು ಅಭಿವೃದ್ಧಿಯತ್ತ ದಾಪುಗಾಲು ಹಾಕಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ, ದಾನಿಗಳ ನೆರವಿನಿಂದ ಆದಾಯ ರಹಿತ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಶ್ರಮಿಸಲಾಗುವುದು ಎಂದರು.ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಎನ್.ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅತಿಥಿ ಅಭ್ಯಾಗತರಾಗಿ ಮಾಜಿ ಸಚಿವ ಕೆ. Top 5 Best Online Slots Sites Reviews Top 5 Best Online Slots https://casinodulacleamy.com/ Sites Top 25 New Online Slots SitesFull of all the latest online slots games, you’re sure to find one that you like. ಅಭಯಚಂದ್ರ ಜೈನ್, ಕಾಂಗ್ರೆಸ್ (ಐ) ಪಕ್ಷದ ಯುವ ನಾಯಕ ಮಿಥುನ್ ರೈ, ಉದ್ಯಮಿ ಪ್ರಸಾದ್ ಶೆಟ್ಟಿ ಮುಂಡ್ಕೂರು ಅಂಗಡಿ ಗುತ್ತು, ಶೇಖರ ಶೆಟ್ಟಿ ಕಿಲ್ಪಾಡಿ ಬಂಡಸಾಲೆ, ಬಪ್ಪನಾಡು ದೇವಳದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಡಾ| ಪಿ.ವಿ.ಶೆಟ್ಟಿ ಮುಂಬಯಿ, ಜಯ ಎ.ಶೆಟ್ಟಿ ಮುಂಬಯಿ, ಅತಿಕಾರಿಬೆಟ್ಟು ಗ್ರಾಪಂ ಅಧ್ಯಕ್ಷ ಮನೋಹರ ಕೋಟ್ಯಾನ್, ಸದಸ್ಯ ಕೃಷ್ಣ ಶೆಟ್ಟಿಗಾರ್, ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಗುರುಪ್ರಸಾದ್ ಭಟ್, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಸತೀಶ್ ಶೆಟ್ಟಿ ಕೆಂಚನಕೆರೆ, ವೇ| ಮೂ| ವಾದಿರಾಜ ಉಪಾಧ್ಯಾಯ ಕೊಲಕಾಡಿ, ಬಪ್ಪನಾಡು ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಶಿಮಂತೂರು ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಉದಯಕುಮಾರ್ ಶೆಟ್ಟಿ, ಕಿಲ್ಪಾಡಿ ಗ್ರಾ.ಪಂ ಉಪಾಧ್ಯಕ್ಷ ಗೋಪಿನಾಥ ಪಡಂಗ, ಶಿವರಾಮ ಜಿ.ಶೆಟ್ಟಿ ಅಜೆಕಾರು, ಉದಯಕುಮಾರ್ ಶೆಟ್ಟಿ ಅಧಿಧನ್, ಮೂಲ್ಕಿ ನ.ಪಂ ಮುಖ್ಯಾಧಿಕಾರಿ ಚಂದ್ರಪೂಜಾರಿ, ಮಂಡಲಾಧ್ಯಕ್ಷ ಸುನಿಲ್ ಆಳ್ವ, ಕರುಣಾಕರ ಶೆಟ್ಟಿ, ಜಯ ಶೆಟ್ಟಿ ಮುಂಬಯಿ, ಸಹಕಾರಿ ಪ್ರಕೋಷ್ಠದ ಸಂಚಾಲಕ ರಂಗನಾಥ ಶೆಟ್ಟಿ, ಪದ್ಮಿನಿ ವಿಜಯ ಶೆಟ್ಟಿ, ಶ್ರೀಕಾಂತ್ ಶೆಟ್ಟಿ ಕೆಂಚನಕೆರೆ, ಸುನಿಲ್ ಆಳ್ವ, ಶರತ್ ಕುಬೆವೂರು, ಮೋಹನ್ ಕೋಟ್ಯಾನ್ ಶಿಮಂತೂರು ಮತ್ತಿತರರು ಉಪಸ್ಥಿತರಿದ್ದರು.
ಇಂದಿಲ್ಲಿ ಸಿಂಹ ಸಂಕ್ರಮಣದ ಶುಭ ಸೋಮವಾರ ದೇವಸ್ಥಾನದ ಪ್ರಧಾನ ಆರ್ಚಕ ವೇ| ಮೂ| ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿ ಹಾಗೂ ಅರ್ಚಕ ಪುರುಷೋತ್ತಮ ಭಟ್ ನೇತೃತ್ವದಲ್ಲಿ ವಿಶೇಷ ಸಾರ್ವಜನಿಕ ಲಕ್ಷ ತುಳಸಿ ಅರ್ಚನೆ, ವಿಶೇಷ ಪ್ರಾರ್ಥನೆ ನಡೆದು ಪೂಜಾಕೈಂಕರ್ಯ ನೆರವೇರಿಸಲ್ಪಟ್ಟಿತು.
ತಂತ್ರಿಗಳು ಆಶೀರ್ವಚನ ನೀಡಿ ಭಕ್ತಜನರ ದುರಿತ ನಿವಾರಣಾ ನಿಮಿತ್ತ ಲೋಕಕಲ್ಯಾಣಾರ್ಥವಾಗಿ ಲಕ್ಷ ತುಳಸಿ ಅರ್ಚನೆ ನಡೆಸಲಾಗಿದ್ದು ಲೋಕಕ್ಕೆ ಬಂದಿರುವ ಕೊರೊನಾ ಮಹಾಮಾರಿಯ ಕಂಟಕ ದೂರವಾಗಿ ಶಾಂತಿ ನೆಲೆಸಲಿ ಎಂದರು.
ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ದಿನೇಶ್ಚಂದ್ರ ಅಜಿಲ, ಹರೀಶ್ ಶೆಟ್ಟಿ ಹಾಗೂ ಶಿಮಂತೂರು ಶ್ರೀ ಆದಿ ಜನಾರ್ದನ ಸೇವಾ ಯುವಕ ಮಂಡಲ ,ಮಹಿಳಾ ಭಜನಾ ಮಂಡಳಿ ಸದಸ್ಯರು ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಸಿಕೊಟ್ಟರು.